ಗುಟುಕು ನೀರಿಗಾಗಿ ಗರ್ಭಪಾತ ಶೀರ್ಷಿಕೆಯಡಿ ಸುವರ್ಣನ್ಯೂಸ್​ ಮಾಡಿರುವ ವರದಿಯಿಂದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.​ಕೆ. ಪಾಟೀಲ್ ಎಚ್ಚೆತ್ತುಕೊಂಡಿದ್ದಾರೆ. ಇದು ಸುವರ್ಣ ನ್ಯೂಸ್ ವರದಿಗೆ ಸಿಕ್ಕ ಫಲಶೃತಿಯಾಗಿದೆ.

ಬೆಳಗಾವಿ (ಏ.06): ಗುಟುಕು ನೀರಿಗಾಗಿ ಗರ್ಭಪಾತ ಶೀರ್ಷಿಕೆಯಡಿ ಸುವರ್ಣನ್ಯೂಸ್​ ಮಾಡಿರುವ ವರದಿಯಿಂದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.​ಕೆ. ಪಾಟೀಲ್ ಎಚ್ಚೆತ್ತುಕೊಂಡಿದ್ದಾರೆ. ಇದು ಸುವರ್ಣ ನ್ಯೂಸ್ ವರದಿಗೆ ಸಿಕ್ಕ ಫಲಶೃತಿಯಾಗಿದೆ.

ಮಹಿಳೆಯರು ನೀರನ್ನ ಹೊತ್ತು ಬಂಜೆಯಾಗುತ್ತಿದ್ದ ಬಗ್ಗೆ ಸುವರ್ಣ ನ್ಯೂಸ್​ ನಿರಂತರವಾಗಿ 5 ದಿನಗಳ ಕಾಲ ವಿಸ್ತ್ರತ ವರದಿ ಮಾಡಿತ್ತು. ವರದಿ ಮಾಡಿದ ದಿನ ನೀರು ಕೊಟ್ಟು ಅಧಿಕಾರಿಗಳು ಕೈತೊಳೆದುಕೊಂಡಿದ್ದರು. ವರದಿ ಪ್ರಸಾರದ ಮಾಡಿದ ಬಳಿಕ ಸಚಿವರು ಎಚ್ಚೆತ್ತುಕೊಂಡಿದ್ದಾರೆ. 48 ಗಂಟೆಗಳೊಳಗೆ ಸ್ಥಳಕ್ಕೆ ತೆರಳುವಂತೆ ಮುಖ್ಯಕಾರ್ಯನಿರ್ವಾಹಣಾಧಿಕಾರಿಗೆ ಸೂಚನೆ ನೀಡಿದ್ದಾರೆ. ಸಮಸ್ಯೆ ಬಗೆಹರಿಸುವುದಾಗಿ ಬೆಳಗಾವಿಯ ಹೊಸವಂಟಮೂರಿ ಗ್ರಾಮದ ಜನರಿಗೆ ಸಚಿವರು ಅಭಯ ನೀಡಿದ್ದಾರೆ.