ಜಗತ್ತನ್ನೇ ರಂಜಿಸಿದ್ದ ಪಾಪ್ ಗಾಯಕ ಮೈಕಲ್ ಜಾಕ್ಸನ್ ಕುರಿತಾಗಿ ಸ್ಫೋಟಕ ಸತ್ಯವೊಂದನ್ನು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರೆ ಹೊರ ಹಾಕಿದ್ದಾರೆ. ಜಾಕ್ಸನ್ ವಿಶಿಷ್ಟ ದ್ವನಿಯನ್ನು ಹಾಗೆ ಕಾಪಾಡಲು ಅವರ ತಂದೆ ಜೋ ಜಾಕ್ಸನ್ ಮೈಕಲ್ ಸಣ್ಣವನಾಗಿದ್ದಾಗಿನಿಂದ ವಿವಿಧ ರಾಸಾಯನಿಕ ನೀಡುತ್ತ ಬಂದಿದ್ದರು ಎಂದಿದ್ದಾರೆ.

ಮೈಕಲ್ ಜಾನ್ಸನ್ ಗೆ ವಿವಿಧ ಹಂತಗಳಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರೇ ಹೀಗೆ ಹೇಳಿರುವುದು ಇದೀಗ ದೊಡ್ಡ ಸುದ್ದಿಯಾಗಿದೆ. ವೈದ್ಯ ಕರ್ನಡ್ ಮುರ್ರೆ [65] ಹೇಳಿರುವ ಅಂಶವನ್ನು ವೆಬ್ ತಾಣವೊಂದು ವರದಿ ಮಾಡಿದೆ.

ನರಹತ್ಯೆ ಆರೋಪದಲ್ಲಿ ಎರಡು ವರ್ಷ ಜೈಲಿನಲ್ಲಿ ಕಳೆದಿರುವ ಮುರ್ರೆ ಇದೀಗ ಹೇಳಿರುವ ಮಾತು ಮೈಕಲ್ ಸಾವಿನ ವಿಚಾರದಲ್ಲಿ ಹುಟ್ಟಿಕೊಂಡ ಅನುಮಾನಗಳಿಗೆ ಉತ್ತರ ಹೇಳುವುದೋ ಗೊತ್ತಿಲ್ಲ.