ಬೆಂಗಳೂರಿನ ಮೆಟ್ರೋ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸುಂಕದಕಟ್ಟೆಯ ಮೆಟ್ರೋ ವಸತಿ ಗೃಹದಲ್ಲಿ ನಡೆದಿದೆ.

ಬೆಂಗಳೂರು(ಅ.05): ಬೆಂಗಳೂರಿನ ಮೆಟ್ರೋ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸುಂಕದಕಟ್ಟೆಯ ಮೆಟ್ರೋ ವಸತಿ ಗೃಹದಲ್ಲಿ ನಡೆದಿದೆ.

ಮೆಟ್ರೋ ಹಿರಿಯ ಅಧಿಕಾರಿಗಳ ವಿರುದ್ಧ ಕಿರಿಕುಳ ಆರೋಪ ಹಿನ್ನೆಲೆ ಮೆಟ್ರೋ ಸಿಬ್ಬಂದಿ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಂತೋಷ್​ ಕಳೆದ ಮೂರು ವರ್ಷಗಳಿಂದ ಮೆಟ್ರೋದಲ್ಲಿ ಕೆಲಸ ಮಾಡತ್ತಿದ್ದು, ಹಿರಿಯ ಅಧಿಕಾರಿಗಳ ಕಿರಿಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪದಡಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.