ಬೆಂಗಳೂರು(ಸೆ.19): ಬೆಂಗಳೂರಿಗರ ಕನಸಿನ ಯೋಚನೆ ನಮ್ಮ ಮೆಟ್ರೋ ಸಂಚಾರ, ಮುಂದಿನ ದಿನಗಳಲ್ಲಿ ಕೊಂಚ ದುಬಾರಿ ಪ್ರಯಾಣವಾಗಲಿದೆ. ಇನ್ನಾರು ತಿಂಗಳಲ್ಲಿ ಮೊದಲ ಹಂತದ ಪೂರ್ಣ ಕಾಮಗಾರಿ ಮುಗಿಸಲಿರುವ ನಮ್ಮ ಮೆಟ್ರೋ ನಿಗಮ ಪ್ರಯಾಣ ದರವನ್ನು ಹೆಚ್ಚಿಸುವ ಚಿಂತನೆ ನಡೆಸುತ್ತಿದೆ, ಈ ಬಗ್ಗೆ ಒಂದು ವರದಿ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಮ್ಮ ಮೆಟ್ರೋ ಪ್ರಯಾಣ ದರ ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ. ಮೆಟ್ರೋ ಮೊದಲ ಹಂತದ ಕಾಮಗಾರಿ 2016ರ ಕೊನೆಯ ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ನಂತರ ದರವನ್ನು ಹೆಚ್ಚಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಸದ್ಯ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮತ್ತು ಸಂಪಿಗೆ ರಸ್ತೆ-ನಾಗಸಂದ್ರ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ನಡೆಸುತ್ತಿದು. ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನೇರಳೆ ಮಾರ್ಗದಲ್ಲಿ ಪ್ರತಿನಿತ್ಯ 1.35 ಲಕ್ಷ ಪ್ರಯಾಣಿಕರು ಮತ್ತು ಸಂಪಿಗೆ ರಸ್ತೆ-ನಾಗಸಂದ್ರ ಮಾರ್ಗದಲ್ಲಿ 45 ಸಾವಿರ ಪ್ರಯಾಣಿಕರು ದಿನನಿತ್ಯ ಪ್ರಯಾಣಿಸುತ್ತಿದ್ದಾರೆ. ನಗರದಲ್ಲಿ ಮೆಟ್ರೋ ಸಂಚಾರ ಆರಂಭವಾದಾಗಿನಿಂದ ಇಲ್ಲಿವರೆಗೂ ದರ ಹೆಚ್ಚಳ ಮಾಡಿಲ್ಲ. ಈಗ ವಿದ್ಯುತ್ ಇತರ ಸೇವೆಗಳು ಮತ್ತು ವಿದ್ಯುತ್ ದರಗಳು ಹೆಚ್ಚಳವಾಗಿವೆ. ಆದ್ದರಿಂದ,ಮೆಟ್ರೋ ದರ ಹೆಚ್ಚಳಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ ಅಂತಾ ಮೆಟ್ರೋ ನಿಗಮದ ಅಧಿಕಾರಗಳು ತಿಳಿಸಿದ್ದಾರೆ.

ಸಧ್ಯದಲ್ಲಿ ಮೆಟ್ರೋ ದರ ಹೆಚ್ಚಳವಾಗದಿದ್ದರೂ ಮುಂದಿನ ದಿನಗಳಲ್ಲಿ ದರ ಏರಿಕೆ ಆಗಲಿದೆ. ಇನ್ನೂ ಮೆಟ್ರೋ ನಿಗಮದ ಈ ಚಿಂತನೆಗೆ ಪ್ರಯಾಣಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.