ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತಿರುವ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಾಸಕರ ವ್ಯಾಪ್ತಿಯಲ್ಲಿ ಕಡಿಮೆ ಮತದಾರರಿದ್ದರೆ ಅಭಿವೃದ್ಧಿ ಸುಲಭ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಾಗೆಯೇ ತಮಿಳುನಾಡಿನ ದೀಪ ವಿವಾದದ ಕುರಿತು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದಾರೆ.
ಕೋಲಾರ : ಕ್ಷೇತ್ರ ಪುನರ್ ವಿಂಗಡಣೆ ಮಸೂದೆ (Delimitation Bill) ಸಂಸತ್ತಿನಲ್ಲಿ ಮಂಡನೆಯಾಗುವ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳು ಮತ್ತು ನಾಯಕರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕಾಂಗ್ರೆಸ್ ತೀವ್ರವಾಗಿ ವಿರೋಧ ಮಾಡ್ತಿದೆ. ಈ ಮಧ್ಯೆ ಕೋಲಾರ ಕ್ಷೇತ್ರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ Delimitation Bill ಬೆಂಬಲ ಘೋಷಿಸಿದ್ದಾರೆ.
ನಾನು ಕ್ಷೇತ್ರ ಪುನರ್ವಿಂಗಡನೆ ಬಿಲ್ ಸ್ವಾಗತ ಮಾಡುತ್ತೇನೆ ಎಂದು ಕೊತ್ತೂರು ಮಂಜುನಾಥ್ ಹೇಳಿದ್ದಾರೆ. ಒಬ್ಬೊಬ್ಬ ಶಾಸಕರಿಗೆ 1 ಲಕ್ಷ, 1.5 ಲಕ್ಷ ಮತದಾರರಿದ್ದರೆ ಕೆಲಸ ಮಾಡುವುದು ಸುಲಭ. ಕ್ಷೇತ್ರ ಪುನರ್ವಿಂಗಡನೆ ಬಿಲ್ ಅಭಿವೃದ್ದಿಗೆ ಪೂರಕವಾಗಿದೆ. ಇಂಡೋನೇಷ್ಯಾ, ಮಲೇಷಿಯಾ, ಕಾಂಬೋಡಿಯಾ, ಸಿಂಗಾಪುರ್ ನಲ್ಲಿ MP ವ್ಯಾಪ್ತಿಗೆ 60 ಸಾವಿರ ಮತಗಳಿದೆ, MLA ವ್ಯಾಪ್ತಿಗೆ 8 ಸಾವಿರ ಮತಗಳಿವೆ.
ಆದರೆ ನಮ್ಮಲ್ಲಿ ನಗರಸಭೆ ಸದಸ್ಯರಿಗೆ 7 ಸಾವಿರ ಮತಗಳು ಸೇರುತ್ತದೆ. ನಮ್ಮಲ್ಲೂ ಜನಸಂಖ್ಯೆಗೆ ಅನುಗಣವಾಗು ಹೆಚ್ಚಾದರೆ ಕೆಲಸ ಮಾಡಲು ಸುಲಭ. ಹಾಗಾಗಿ ವಿದೇಶಗಳಲ್ಲಿ ಅಭಿವೃದ್ಧಿ ಹೆಚ್ಚಾಗಿದೆ. ನಮ್ಮಲ್ಲೂ 1 ರಿಂದ 1.5 ಲಕ್ಷದ ಮತದಾರರ ಕ್ಷೇತ್ರಕ್ಕೆ ಒಂದೊಂದು MLA ಸ್ಥಾನ. 5 ರಿಂದ 8 ಲಕ್ಷ ಮತದಾರರ ಕ್ಚೇತ್ರಕ್ಕೆ ಒಂದೊಂದು MP ಸ್ಥಾನ ಮಾಡಲಿ ಎಂದು ಕೋಲಾರದಲ್ಲಿ ಶಾಕರು ಹೇಳಿದ್ದಾರೆ.
ಕೇಂದ್ರ ಸರ್ಕಾರವು 2026ರ ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ನಡೆಸಿರುವ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳಿಗೆ ಕಾಂಗ್ರೆಸ್ ಪಕ್ಷವು ತೀವ್ರ ವಿರೋಧ ವ್ಯಕ್ತಪಡಿಸಿದೆ. ಹೀಗಿರುವಾಗ ಕೊತ್ತೂರು ಮಂಜುನಾಥ್ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಸಿದ್ಧಾಂತ ಹಾಳು ಮಾಡದಿರಿ
ತಮಿಳುನಾಡಿನ ತಿರುಪ್ಪರಂಕುಂದ್ರಂ ಬೆಟ್ಟದ ಕಾರ್ತಿಕ ದೀಪ ವಿವಾದಕ್ಕೆ ಪ್ರತಿಕ್ರಿಯಿಸಿರುವ ಶಾಸಕ, ಯಾವುದೆ ಸಮುದಾಯ, ಸಿದ್ಧಾಂತವನ್ನು ಹಾಳು ಮಾಡದಿರಿ. ದೀಪ ಬೆಳಗಿಸಬಾರದು ಎಂದು ಯಾರ್ಯಾರೊ ಪ್ರಯತ್ನ ಮಾಡಿದ್ರು, ಆದ್ರೆ ಸುಪ್ರೀಂ ಕೋರ್ಟ್ ದೇಗುಲ ಸಮಿತಿಯನ್ನೆ ಅಮಾನತು ಮಾಡಿದೆ. CRPF ಪಡೆ ದೀಪ ಬೆಳಗಿಸಲು ಆಗಮಿಸೊದಾಗ ಭವ್ಯ ಸ್ವಾಗತ ದೊರಕಿದೆ.
ಜನರು ವಿವಿಧ ಬಣ್ಣದ ಹೂಗಳಿಂದ ಹೂಮಳೆ ಸುರಿಸಿ CRPF ಪಡೆಯನ್ನ ಸ್ವಾಗತಿಸಿದ್ದಾರೆ. ದೀಪ ಬೆಳಗಿಸಿದ ಸಂತಸಕ್ಕೆ ಜನರು ಭಾವುಕರಾದರು. ಒಂದು ಸಮುದಾಯದ ಸಿದ್ಧಾಂತ, ಪದ್ದತಿ ಹಾಳು ಮಾಡಲು ಹೋದರೆ ದೇವರ ರೂಪದಲ್ಲಿ ಸುಪ್ರೀಂಕೋರ್ಟ್ ಅದನ್ನ ತಡೆದಿದೆ. ಈ ಹಿಂದಿನಿಂದಲೂ ಬೆಳಗಿಸ್ತಿದ್ದ ದೀಪ ಕಳೆದ 80 ವರ್ಷದಿಂದ ಬೆಳಗಿಸಿಲ್ಲ. ಇದೀಗ ದೀಪ ಬೆಳಗಿಸಿದ್ದಾರೆ, ಅದರಿಂದ ಎಲ್ಲರಿಗೂ ಒಳ್ಳೆಯದಾಗುತ್ತೆ ಎಂದರು.


