ಸಹೋದರರಾದ ಸತೀಶ್ ಜಾರಕಿಹೋಳಿ ಹಾಗೂ ರಮೇಶ್ ಜಾರಕಿ ಹೋಳಿ ಒಣ ಪ್ರತಿಷ್ಠೆಗೆ  ಬೆಳಗಾವಿ ಪಾಲಿಕೆ ಅಧಿಕಾರವನ್ನು  ಮಹಾರಾಷ್ಟ್ರ ಏಕಿಕರಣ ಸಮಿತಿ ಪಡೆದುಕೊಂಡಿದೆ.

ಬೆಳಗಾವಿ(ಮಾ.01):  ಕನ್ನಡಿಗರ ಕಿತ್ತಾಟದ ಪರಿಣಾಮವಾಗಿ ಬೆಳಗಾವಿ ಮಹಾನಗರ ಪಾಲಿಕೆ ಎಂಇಎಸ್ ಪಾಲಾಗಿದೆ. ಸಹೋದರರಾದ ಸತೀಶ್ ಜಾರಕಿಹೋಳಿ ಹಾಗೂ ರಮೇಶ್ ಜಾರಕಿ ಹೋಳಿ ಒಣ ಪ್ರತಿಷ್ಠೆಗೆ ಬೆಳಗಾವಿ ಪಾಲಿಕೆ ಅಧಿಕಾರವನ್ನು ಮಹಾರಾಷ್ಟ್ರ ಏಕಿಕರಣ ಸಮಿತಿ ಪಡೆದುಕೊಂಡಿದೆ. ಪಾಲಿಕೆ ಚುನಾವಣೆಯಲ್ಲಿ ಕನ್ನಡಿಗರ ಮತ ಹೊಡೆದು ಹೋಯಿತು. ಮೂವರು ಕನ್ನಡಿಗ ಜನಪ್ರತಿನಿಧಿಗಳಾದ ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ,ಬೆಳಗಾವಿ ಸಂಸದ ಸುರೇಶ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಮತದಾನದಿಂದ ದೂರವುಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಂತಿಮವಾಗಿ ಎಂಇಎಸ್'ನ ಸಂಜೋತಾ ಬಾಂದೇಕರ್ ಮೇಯರ್ ಆಗಿ ಆಯ್ಕೆಯಾದರೆ, ನಾಗೇಶ್ ಮಾಂಡೋಳಕರ್ ಉಪ ಮೇಯರ್ ಆಗಿ ನೇಮಕವಾದರು.

ಬೆಳಗಾವಿ ಪಾಲಿಕೆ ಬಲಾಬಲ

ಪಾಲಿಕೆಯ ಒಟ್ಟು ಸಸ್ಯ ಬಲ - 61

ಎಂಇಎಸ್ ಒಟ್ಟು ಸದಸ್ಯರು - 32

ಕನ್ನಡಿಗ ಒಟ್ಟು ಸದಸ್ಯರು - 24

ಇತರೆ ಒಟ್ಟು ಸದಸ್ಯರು - 5

ಒಟ್ಟು ಮತಗಳು ೫೭ + ೬ ಮಂದಿ ನಾಮನಿರ್ದೇಶಿತ ಸದಸ್ಯರು

ಒಟ್ಟು ೬೦ ಮಂದಿ ಸದಸ್ಯರು ಮತದಾನ ಮಾಡಬೇಕಿತ್ತು

ರಮೇಶ ಜಾರಕಿಹೊಳಿ ಬೆಂಬಲಿತ ಕನ್ನಡಿಗ ಮೇಯರ್ ಅಭ್ಯರ್ಥಿ ಜಯಶ್ರೀ ಮಾಳಗಿಗೆ ೧೭ ಮತಗಳು

ಸತೀಶ ಜಾರಕಿಹೊಳಿ ಬೆಂಬಲಿತ ಕನ್ನಡಿಗ ಮೇಯರ್ ಅಭ್ಯರ್ಥಿ ಪುಷ್ಪಾ ಪರ್ವತರಾವ್​ಗೆ ೧೦ ಮತಗಳು

ಉಪ ಮೇಯರ್ ಕನ್ನಡಿಗ ಅಭ್ಯರ್ಥಿ ಮುಜಮಿಲ್ ಡೋಣಿ ಅವರಿಗೆ ೧೦ ಮತಗಳು

ಉಪ ಮೇಯರ್ ಕನ್ನಡಿಗ ಅಭ್ಯರ್ಥಿ ಫಹೀಮ್ ನಾಯಿಕವಾಡಿ ಅವರಿಗೆ ೧೦ ಮತಗಳು