ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನಾಚರಣೆ ಆಚರಿಸಲು ನಾಡದ್ರೋಹಿಗಳಿಗೆ ಅನುಮತಿ ನೀಡಲಾಗಿದೆ.. ಬೆಳಗಾವಿ ಪೊಲೀಸ್ ಆಯುಕ್ತರು ಎಂಇಎಸಗೆ 11 ಷರತ್ತು ವಿಧಿಸಿ ಅನುಮತಿ ನೀಡಿದೆ.. 6ಕೋಟಿ  ಕನ್ನಡಿಗರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ನಾಡದ್ರೋಹಿಗಳಿಗೆ ಸೋಪ್ಪುಹಾಕಿದೆ.

ಬೆಳಗಾವಿ (ಅ.31): ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನಾಚರಣೆ ಆಚರಿಸಲು ನಾಡದ್ರೋಹಿಗಳಿಗೆ ಅನುಮತಿ ನೀಡಲಾಗಿದೆ.. ಬೆಳಗಾವಿ ಪೊಲೀಸ್ ಆಯುಕ್ತರು ಎಂಇಎಸಗೆ 11 ಷರತ್ತು ವಿಧಿಸಿ ಅನುಮತಿ ನೀಡಿದೆ.. 6ಕೋಟಿ ಕನ್ನಡಿಗರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ನಾಡದ್ರೋಹಿಗಳಿಗೆ ಸೋಪ್ಪುಹಾಕಿದೆ.

ಇಡೀ ರಾಜ್ಯವೇ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲು ತುದಿಗಾಲು ಮೇಲೆ ನಿಂತಿದೆ. ಆದ್ರೆ ಕುಂದಾನಗರಿ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಕರಾಳ ದಿನವಾಚರಿಸಲು ಮುಂದಾಗಿದೆ. ನಾಡದ್ರೋಹಿಗಳಿಗೆ ಕರಾಳ ದಿನವಾಚರಿಸಲು ಬೆಳಗಾವಿ ಕಮೀಷರನ್ ಷರತ್ತು ಬದ್ಧ ಅನುಮತಿ ನೀಡಿದ್ದಾರೆ. ಈಗಾಗಲೇ ನಾಡದ್ರೋಹಿಗಳು ರಾಜ್ಯೋತ್ಸವದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕರಾಳ ದಿನವನ್ನ ಮುಂದಿಟ್ಟುಕೊಂಡು ಭಾಷಾ ಸಾಮರಸ್ಯ ಕದಡುವ ಕೃತ್ಯ ನಡೆಸುತ್ತಿದ್ದಾರೆ.

ಎಂಇಎಸ್ ಪುಂಡರಿಗೆ ಪೊಲೀಸರು 11 ಷರತ್ತು ವಿಧಿಸಿದ್ದಾರೆ. ಬೆಳಗ್ಗೆ 9 ಗಂಟೆಗೆ ನಗರದ ಧರ್ಮವೀರ ಸಂಭಾಜಿ ಉದ್ಯಾನದಿಂದ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಅವಕಾಶ ನೀಡಲಾಗಿದೆ. ಆದರೆ ಮಧ್ಯಾಹ್ನ 1 ಗಂಟೆಯೊಳಗಾಗಿ ಕರಾಳ ದಿನದ ರ್ಯಾಲಿ ಪೂರ್ಣಗೊಳಿಸುವಂತೆ ಸೂಚಿಸಿದ್ದು, ಯಾವುದೇ ಕಾರಣಕ್ಕೂ ಕನ್ನಡ ವಿರೋಧಿ ಘೋಷಣೆ ಮೊಳಗಿಸದಂತೆ ನಿರ್ದೇಶನ ನೀಡಲಾಗಿದೆ.

ಒಟ್ಟಿನಲ್ಲಿ ಕನ್ನಡ ರಾಜ್ಯೋತ್ಸವ ದಿನದಂದು ಮತ್ತೆ ನಾಡದ್ರೋಹಿಗಳ ಕರಾಳ ದಿನ ಆಚರಿಸಲು ಅನುಮತಿ ನೀಡಿದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.