ಇತ್ತೀಚಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿವಾದದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಬಂದೀಖಾನೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎನ್.ಎಸ್.ಮೇಘರಿಕ್ ಅವರು ಕಾರಾಗೃಹದ ಅಕ್ರಮಗಳ ತಡೆಗಟ್ಟುವಿಕೆ ಸಲುವಾಗಿ ಬುಧವಾರ 12 ತಾಸುಗಳ ಕಾಲ ಅಧಿಕಾರಿಗಳ ಜತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ಬೆಂಗಳೂರು(ಆ.04): ಇತ್ತೀಚಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿವಾದದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಬಂದೀಖಾನೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎನ್.ಎಸ್.ಮೇಘರಿಕ್ ಅವರು ಕಾರಾಗೃಹದ ಅಕ್ರಮಗಳ ತಡೆಗಟ್ಟುವಿಕೆ ಸಲುವಾಗಿ ಬುಧವಾರ 12 ತಾಸುಗಳ ಕಾಲ ಅಧಿಕಾರಿಗಳ ಜತೆ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ನಗರದ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಬಂಧೀಖಾನೆ ಇಲಾಖೆಯ ಕೇಂದ್ರ ಕಚೇರಿಯಲ್ಲಿ ದಿನವಿಡೀ ನಡೆದ ಸಭೆಯಲ್ಲಿ ಮೇಘರಿಕ್ ಅವರು ರಾಜ್ಯದ ಪ್ರತಿಯೊಂದು ಜೈಲು ಮುಖ್ಯಸ್ಥರಿಂದಲೂ ಅಲ್ಲಿನ ಸ್ಥಿತಿಗತಿ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಅಧಿಕಾರಿಯೊಬ್ಬರು ಕನ್ನಡಪ್ರ‘ಕ್ಕೆ ತಿಳಿಸಿದ್ದಾರೆ.
ಕಾನೂನಿನ ಚೌಕಟ್ಟಿನಲ್ಲೇ ಕಾರಾಗೃಹಗಳ ಕಾರ್ಯನಿರ್ವಹಣೆ ನಡೆಯಬೇಕು. ಯಾವುದೇ ಕಾರಣಕ್ಕೂ ಯಾರದ್ದೇ ಒತ್ತಡ ಬಂದರೂ ಕಾರಾಗೃಹದ ಮ್ಯಾನ್ಯುಯಲ್ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಎಡಿಜಿಪಿ, ಕಾನೂನು ಮೀರಿ ನಡೆದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ನೇರವಾಗಿ ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಇತ್ತೀಚಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ನಡೆದಿರುವ ಘಟನೆಯಿಂದ ರಾಷ್ಟ್ರ ಮಟ್ಟದಲ್ಲಿ ಇಲಾಖೆ ಗೌರವ ಹಾಳಾಗಿದೆ. ನ್ಯಾಯಾಲಯಗಳ ಆದೇಶ ಹೊಂದಿದ್ದರೆ ಅಂತಹವರಿಗೆ ಕಾನೂನು ಅನುಸಾರ ಸೌಲಭ್ಯ ನೀಡಲು ಯಾವುದೇ ಅಭ್ಯಂತರವಿಲ್ಲ. ಹಾಗಂತ ಲಂಚದಾಸೆಗೆ ಅಕ್ರಮವಾಗಿ ಸೌಲಭ್ಯ ಒದಗಿಸುವುದು ಶಿಕ್ಷಾರ್ಹವಾಗುತ್ತದೆ ಎಂದು ಎಡಿಜಿಪಿ ಗುಡುಗಿದ್ದಾರೆ.
ಸಜಾ ಮತ್ತು ವಿಚಾರಣಾಧೀನ ಕೈದಿಗಳನ್ನು ಯಾವುದೇ ತಾರತಮ್ಯವಿಲ್ಲದೆ ಸಮಾನವಾಗಿ ನಡೆಸಿಕೊಳ್ಳಿ, ಪುಂಡಾಟಿಕೆ ನಡೆಸುವ ಕೈದಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಿ. ಗೂಂಡಾಗಿರಿ ನಡೆಸಿದರೆ ಅಂತಹವರನ್ನು ನಿರ್ದಾಕ್ಷಿಣ್ಯವಾಗಿ ಕಮಾನು (ಜೈಲಿನಿಂದ ಮತ್ತೊಂದು ಜೈಲಿಗೆ ವರ್ಗಾವಣೆ) ಎತ್ತುವಂತೆ ಸೂಚಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳು ದಿನದ 14 ತಾಸು ಚಾಲ್ತಿಯಲ್ಲಿರಬೇಕು. ಮಾದಕ ವಸ್ತುಗಳ ನುಸುಳದಂತೆ ಜಾಗ್ರತೆ ವಹಿಸಬೇಕು ಸೇರಿದಂತೆ ಕಾರಾಗೃಹಗಳ ‘ದ್ರತೆ ವ್ಯವಸ್ಥೆ ಬಿಗಿಗೊಳಿಸಲು ಕೆಲವು ಸಲಹೆಗಳನ್ನು ಸಭೆಯಲ್ಲಿ ನೀಡಿದ ಅವರು, ಕೈದಿಗಳ ಪರಿವರ್ತನೆ ಸಂಬಂಧ ಕಾರ್ಯಕ್ರಮ ಜಾರಿಗೆ ಆದ್ಯತೆ ನೀಡಿ, ಅದರಲ್ಲೂ ವೃತ್ತಿ ಕೌಶಲ್ಯ ತರಬೇತಿ ಕಾರ್ಯಾಗಾರಗಳಿಗೆ ಹೆಚ್ಚು ಒತ್ತು ನೀಡುವಂತೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.
ಬುಧವಾರ ಬೆಳಗ್ಗೆ 10 ಗಂಟೆಗೆ ಪ್ರಾರಂ‘ವಾದ ಸಭೆಯು ರಾತ್ರಿ 9.30 ಗಂಟೆಗೆ ಮುಕ್ತಾಯವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಸಭೆಯಲ್ಲಿ ಡಿಐಜಿ ಎಚ್.ಎಸ್.ರೇವಣ್ಣ, ಎಐಎಜಿಪಿ ವೀರ‘ದ್ರಸ್ವಾಮಿ ಸೇರಿದಂತೆ ರಾಜ್ಯದ ಎಲ್ಲಾ ಕಾರಾಗೃಹಗಳ ಮುಖ್ಯ ಅಧೀಕ್ಷಕ ಹಾಗೂ ಸಹಾಯಕ ಅಧೀಕ್ಷಕರು ಪಾಲ್ಗೊಂಡಿದ್ದರು.
