ಕರಾಚಿ(ಸೆ.05): ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ದೌರ್ಜನ್ಯ ನಡೆಯುವುದು ಸಾಮಾನ್ಯ. ಅದರಲ್ಲೂ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲೆ ದೌರ್ಜನ್ಯ ನಿತ್ಯ ನಿರಂತರ.

ಇಂತಹ ವಿಷಮ ಪರಿಸ್ಥಿತಿಯಲ್ಲೂ ಪಾಕಿಸ್ತಾನದ ಹಿಂದೂ ಸಮುದಾಯದ ಯುವಕ ಯುವತಿಯರು ಪರಿಶ್ರಮದ ಹಾದಿಯಲ್ಲಿ ಸಾಗುತ್ತಾ ಸಾಧನೆಯ ಶಿಖರವೇರುತ್ತಿದ್ದಾರೆ.

ಅದರಂತೆ ಪಾಕಿಸ್ತಾನದ ಪೊಲೀಸ್ ಇಲಾಖೆ ನಡೆಸಿದ ಅಸಿಸ್ಟಂಟ್ ಸಬ್ ಇನ್ಸಪೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಹಿಂದೂ ಯುವತಿಯೋರ್ವಳು ಇತಿಹಾಸ ಬರೆದಿದ್ದಾಳೆ.

ಪಾಕ್’ನ ಸಿಂಧ್ ಪ್ರಾಂತ್ಯದ ಪುಷ್ಪಾ ಕೋಲ್ಹಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ASI ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ. ಈ ಮೂಲಕ ಸಿಂಧ್ ಪೊಲೀಸ್ ಇಲಾಖೆಗೆ ಆಯ್ಕೆಯಾದ ಮೊದಲ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪುಷ್ಪಾ, ಹೆಣ್ಣುಮಕ್ಕಳಿಗೆ ಶಿಕ್ಷಣ ನಿರಾಕರಿಸುವ ಸಾಮಾಜಿಕ ಪರಿಸ್ಥಿತಿಯನ್ನು ಎದುರಿಸಿ ಪೊಲೀಸ್ ಇಲಾಖೆ ಸೇರಿರುವುದಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ತಮ್ಮ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಿ ಪೋಷಕರು ನನ್ನ ಬೆನ್ನಿಗೆ ನಿಂತಿದ್ದು, ಅವರ ಆಶೀರ್ವಾದದಿಂದಲೇ ೀ ಹುದ್ದೇಗೇರಲು ಸಾಧ್ಯವಾಯಿತು ಎಂದು ಪುಷ್ಪಾ ಕೋಲ್ಹಿ ತಿಳಿಸಿದ್ದಾಳೆ.

ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ  ಹಿಂದೂ ಸಮುದಾಯದ ಇತರ ಯುವತಿಯರಿಗೆ ಮಾದರಿಯಾಗಬೇಕು ಎಂಬುದು ತನ್ನ ಆಸೆ ಎನ್ನುತ್ತಾಳೆ ಪುಷ್ಪಾ ಕೋಲ್ಹಿ.