ಗಣಿಗಾರಿಕೆ ಹಗರಣಗಳ ಕಡತ ಹುಡುಕುವಾಗ ಜಿಂದಾಲ್‌ ಕಂಪನಿಗೆ ಬಿಜೆಪಿ ಅಧಿಕಾರಾವಧಿಯಲ್ಲಿ 5 ಟಿಎಂಸಿ ನೀರು ಹರಿಸಿದ ದಾಖಲೆ ಸಿಕ್ಕಿದೆ. ಇದಕ್ಕಾಗಿ .500 ಕೋಟಿ ಪಡೆದ ಆರೋಪವಿದೆ. ಸಿಎಂ ಅವರೊಂದಿಗೆ ಚರ್ಚಿಸಿ ತನಿಖೆಗೆ ಕೋರುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಬಾಂಬ್‌ ಹಾಕಿದ್ದಾರೆ.

ಬೆಂಗಳೂರು(ಮೇ.26): ಗಣಿಗಾರಿಕೆ ಹಗರಣಗಳ ಕಡತ ಹುಡುಕುವಾಗ ಜಿಂದಾಲ್‌ ಕಂಪನಿಗೆ ಬಿಜೆಪಿ ಅಧಿಕಾರಾವಧಿಯಲ್ಲಿ 5 ಟಿಎಂಸಿ ನೀರು ಹರಿಸಿದ ದಾಖಲೆ ಸಿಕ್ಕಿದೆ. ಇದಕ್ಕಾಗಿ .500 ಕೋಟಿ ಪಡೆದ ಆರೋಪವಿದೆ. ಸಿಎಂ ಅವರೊಂದಿಗೆ ಚರ್ಚಿಸಿ ತನಿಖೆಗೆ ಕೋರುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಬಾಂಬ್‌ ಹಾಕಿದ್ದಾರೆ.

ಕಾಂಗ್ರೆಸ್‌ ಸಚಿವರು ಜಿಂದಾಲ್‌ಗೆ 7 ಟಿಎಂಸಿ ನೀರನ್ನು ಮಾರಾಟ ಮಾಡಿದ್ದಾರೆ ಎಂದು ಬಿ.ಎಸ್‌.ಯಡಿಯೂರಪ್ಪ ಬುಧವಾರ ಆರೋಪಿಸಿದ್ದರು. ಇದರ ಬೆನ್ನಲ್ಲೇ ಮುಳವಾಡದಲ್ಲಿ ಮಾತನಾಡಿದ ನೀರಾವರಿ ಸಚಿವರು, ರಾಜ್ಯದಲ್ಲಿ ಬಜೆಪಿ ಸರ್ಕಾರ ಇದ್ದಾಗ 1ಟಿಎಂಸಿಗೆ .100 ಕೋಟಿಯಂತೆ ಒಟ್ಟು 5 ಟಿಎಂಸಿ ನೀರು ಜಿಂದಾಲ್‌ಗೆ ಬಿಟ್ಟು .500 ಕೋಟಿ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆ ಸಿಕ್ಕಿದ್ದು, ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಿ ತನಿಖೆ ನಡೆಸುವಂತೆ ಕೋರಲಾಗುವುದು ಎಂದರು

ಅಧಿಕಾರಕ್ಕೆ ಬಂದ 24 ತಾಸಲ್ಲಿ ‘ಭ್ರಷ್ಟ' ಪಾಟೀಲ್‌ ವಿರುದ್ಧ ತನಿಖೆ: ಬಿಎಸ್‌ವೈ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಯವಾಗಿದ್ದು, ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ನೀರಾವರಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗುಡುಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೆ ನೀರಾವರಿ ಇಲಾಖೆ ಕಂಡ ಅತಿ ಭ್ರಷ್ಟಸಚಿವ ಎಂ.ಬಿ.ಪಾಟೀಲ. ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅದರಲ್ಲಿ ಪಾಟೀಲರದ್ದು ಹೆಚ್ಚಿನ ಪಾಲಿದೆ ಎಂದರು.

ಆಲಮಟ್ಟಿಜಲಾಶಯದ ಡೆಡ್‌ಸ್ಟೋರೇಜ್‌'ನಲ್ಲಿರುವ ನೀರನ್ನು ಸಚಿವ ಎಂ.ಬಿ.ಪಾಟೀಲ ಜಿಂದಾಲ್‌ ಕಂಪನಿಗೆ ಮಾರಿಕೊಂಡಿದ್ದಾರೆ. ಮತ್ತೊಂದೆಡೆ ಮಲಪ್ರಭಾ ಕಾಲುವೆ ಅಭಿವೃದ್ಧಿ ಹೆಸರಿನಲ್ಲಿ ಹಗಲು ದರೋಡೆ ನಡೆಸಿದ್ದಾರೆ. ಮಲಪ್ರಭಾ ಕಾಲುವೆ ಅಭಿವೃದ್ಧಿ ಕಾಮಗಾರಿಯ ವಿಸ್ತೃತ ಯೋಜನಾ ವರದಿಯ ವೆಚ್ಚವನ್ನು ಈ ಮೊದಲು .400- .500 ಕೋಟಿಗೆ ನಿಗದಿಪಡಿಸಿದ್ದು, ಇದೀಗ ಏಕಾಏಕಿ .1,200 ಕೋಟಿ ವೆಚ್ಚ ಮಾಡಲು ತೀರ್ಮಾನಿಸಿದ್ದಾರೆ. ರಾಜ್ಯ ಸರ್ಕಾರ ಸ್ಟೀಲ್‌ ಬ್ರಿಡ್ಜ್‌ ನಿರ್ಮಾಣದಲ್ಲಿಯೂ .400 ಕೋಟಿ ಲಂಚ ಪಡೆದಿದ್ದು, ಒಂದೊಂದೇ ಹಗರಣ ಬೆಳಕಿಗೆ ಬರಲಿವೆ ಎಂದು ತಿಳಿಸಿದರು.