ಪಾಲಿಕೆ ಕಾರ್ಯಪಾಲಕ ಅಭಿಯಂತರ ತನ್ವೀರ್'ಗೆ ಬೆವರಿಳಿಸಿದರು. ಈ ಪ್ರಶ್ನೆಗೆ ಮೇಯರ್'ಗೆ  ಇವತ್ತಿಗೂ ಉತ್ತರ ಸಿಕ್ಕಿಲ್ಲ? ಜತೆಗೆ ಮಾರುಕಟ್ಟೆ ಹೊರಾಂಗಣದಲ್ಲಿ ಸ್ವಚ್ಛತೆ ಇಲ್ಲ ಎಂದು ಮೇಯರ್ ಸಿಡಿಮಿಡಿಗೊಂಡಿದ್ದಾರೆ.

ಬೆಂಗಳೂರು (ಜ.21): ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ತಲೆ ಎತ್ತಿರುವ ಅಕ್ರಮ ಕಟ್ಟಡ ಮಳಿಗೆಗಳು ಯಾರದು ಗೊತ್ತಿಲ್ಲ ? ಕಟ್ಟಿದವರು ಯಾರು ಗೊತ್ತಿಲ್ಲ ? ಸೊಪ್ಪಿನ ಮಾರುಕಟ್ಟೆಯಲ್ಲಿ ಕನ್ನಡ ಬಾವುಟಗಳ ಸುತ್ತ ಫೆನ್ಸಿಂಗ್ ಹಾಕಿರೊದು ಯಾರು ಗೊತ್ತಿಲ್ಲ ? ಹೀಗೆ ಇಡೀ ಮಾರುಕಟ್ಟೆ ಒತ್ತುವರಿ ಆಗ್ತಾ ಇದೆ? ಹೀಗಾಗಿ ಇಂದು ಅಧಿಕಾರಿಗಳ ವಿರುದ್ಧ ಮೇಯರ್ ಪದ್ಮಾವತಿ ಗರಂ ಆಗಿದ್ದಾರೆ.

ಪಾಲಿಕೆ ಕಾರ್ಯಪಾಲಕ ಅಭಿಯಂತರ ತನ್ವೀರ್'ಗೆ ಬೆವರಿಳಿಸಿದರು. ಈ ಪ್ರಶ್ನೆಗೆ ಮೇಯರ್'ಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ? ಜತೆಗೆ ಮಾರುಕಟ್ಟೆ ಹೊರಾಂಗಣದಲ್ಲಿ ಸ್ವಚ್ಛತೆ ಇಲ್ಲ ಎಂದು ಮೇಯರ್ ಸಿಡಿಮಿಡಿಗೊಂಡಿದ್ದಾರೆ.

ಮಾರುಕಟ್ಟೆಯಲ್ಲಿ ತಲೆಯೆತ್ತಿರುವ ಅಕ್ರಮ ಕಟ್ಟಡಗಳ ಬಗ್ಗೆ ಸುವರ್ಣ ನ್ಯೂಸ್ ವರದಿ ಮಾಡಿತ್ತು.