ಉತ್ತರ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಅಮೇಠಿ ಹಾಗೂ ರಾಯಬರೇಲಿ (ರಾಹುಲ್‌ ಹಾಗೂ ಸೋನಿಯಾ ಕ್ಷೇತ್ರಗಳು) ಬಿಟ್ಟು ಬೇರೆ ಸೀಟು ಕೊಡೋದು ಬೇಡ ಎಂದು ಮಾಯಾವತಿ ಅಖಿಲೇಶ್‌ ಯಾದವ್‌ಗೆ ಹೇಳಿದ್ದು, ಬೆಹೆನ್‌ಜೀಯ ಕಾಂಗ್ರೆಸ್‌ ಮೇಲಿನ ದಿಢೀರ್‌ ಮುನಿಸಿಗೆ ಕಾರಣ ಗೊತ್ತಾಗುತ್ತಿಲ್ಲ.

ಬಿಜೆಪಿ ಮತ್ತು ಕಾಂಗ್ರೆಸ್‌ ಎರಡನ್ನೂ ಟೀಕಿಸುತ್ತಿರುವ ಮಾಯಾವತಿ ತನ್ನದೇ ಆದ ತೃತೀಯ ರಂಗವನ್ನು ಕಟ್ಟಿಕೊಳ್ಳುವ ತಂತ್ರ ರೂಪಿಸುತ್ತಿದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್‌, ಛತ್ತೀಸ್‌ಗಢದಲ್ಲಿ ಅಜಿತ್‌ ಜೋಗಿ, ಹರ್ಯಾಣದಲ್ಲಿ ಚೌಟಾಲಾ ಜೊತೆ ಪ್ರತ್ಯೇಕ ಮೈತ್ರಿ ಮಾಡಿಕೊಂಡಿರುವ ಮಾಯಾವತಿ ಒಂದು ವೇಳೆ ಮಹಾಗಠಬಂಧನ್‌ ಸೀಟು ಹಂಚಿಕೆ ವಿಫಲವಾದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಸೂಚನೆ ಕೊಡುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಅಮೇಠಿ ಹಾಗೂ ರಾಯಬರೇಲಿ (ರಾಹುಲ್‌ ಹಾಗೂ ಸೋನಿಯಾ ಕ್ಷೇತ್ರಗಳು) ಬಿಟ್ಟು ಬೇರೆ ಸೀಟು ಕೊಡೋದು ಬೇಡ ಎಂದು ಮಾಯಾವತಿ ಅಖಿಲೇಶ್‌ ಯಾದವ್‌ಗೆ ಹೇಳಿದ್ದು, ಬೆಹೆನ್‌ಜೀಯ ಕಾಂಗ್ರೆಸ್‌ ಮೇಲಿನ ದಿಢೀರ್‌ ಮುನಿಸಿಗೆ ಕಾರಣ ಗೊತ್ತಾಗುತ್ತಿಲ್ಲ.

ಮನೆ ಬಿಡೋಲ್ಲ ಹೋಗ್ರಿ

ಹಿಂದೆ ದಿಲ್ಲಿಯಲ್ಲಿ ಮುಖ್ಯಮಂತ್ರಿಗಳಿಗೆ ಕಾನೂನು ಸಲಹೆಗಾರರಾಗಿದ್ದ ಬ್ರಜೇಶ್‌ ಕಾಳಪ್ಪ ಅವರಿಗೆ ಆಪ್ತ ಕಾರ್ಯದರ್ಶಿ ಆಗಿದ್ದ ಚೋಪ್ರಾ ಎಂಬಾತನಿಗೆ ಕರ್ನಾಟಕ ಭವನ ಡಬಲ್ ಬೆಡ್‌ರೂಮ್ ಮನೆ ನೀಡಿತ್ತು. ಆದರೆ ಈಗ 6 ತಿಂಗಳಿನಿಂದ ಮನೆ ಖಾಲಿ ಮಾಡಿ ಎಂದು ಬೆನ್ನು ಹತ್ತಿ, ಕೊನೆಗೆ ನೋಟಿಸ್‌ ನೀಡಿದರೂ ಚೋಪ್ರಾ ಮನೆ ಖಾಲಿ ಮಾಡೋದಿಲ್ಲ, ನಿಮಗೆ ಏನೂ ಮಾಡ್ಕೊಳ್ಕೋಕೆ ಆಗಲ್ಲ ಎಂದು ಸ್ವತಃ ರೆಸಿಡೆಂಟ್‌ ಕಮಿಷನರ್‌ಗೆ ಹೇಳಿದ್ದಾರಂತೆ. ಕಾಂಗ್ರೆಸ್‌ ಕಚೇರಿಯಲ್ಲಿ ಎಲ್ಲೋ ಲಿಂಕ್‌ ಇಟ್ಟುಕೊಂಡಿರುವ ಚೋಪ್ರಾನನ್ನು ಎದುರು ಹಾಕಿಕೊಳ್ಳಲು ಅಧಿಕಾರಿಗಳಿಗೆ ಭಯ ಇದ್ದ ಹಾಗಿದೆ.

- ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣ