ವಿಜಯಾ (45), ಪರ್ಯಾ (45), ಸುಜಾತ (38) ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಚಿಕಿತ್ಸೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಲಕ್ಷ್ಮಮ್ಮ ಎಂಬಾಕೆ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಕೂಲಿಕಾರ್ಮಿಕರಾಗಿದ್ದು, ಕೂಲಿಗಾಗಿ ಜಡೆ ಹೋಬಳಿ ತಲಗಡ್ಡೆಯಿಂದ ಚಂದ್ರಗುತ್ತಿ ಹೋಬಳಿ ಅಂಕರವಳ್ಳಿಗೆ ದಿನಾಲು ಮ್ಯಾಕ್ಸಿ ಕ್ಯಾಬ್‌'ನಲ್ಲಿ ಓಡಾಡುತ್ತಿದ್ದರು.
ಸೊರಬ(ನ.21): ತಾಲೂಕಿನ ಚಂದ್ರಗುತ್ತಿ ಹೋಬಳಿ ಬೆನ್ನೂರು ಬಳಿ ಇಂದು ಸಂಜೆ ನಡೆದ ಮ್ಯಾಕ್ಸಿ ಕ್ಯಾಬ್ - ಲಾರಿ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಮೃತಪಟ್ಟಿರುವ ಧಾರುಣ ಘಟನೆ ನಡೆದಿದೆ.
ವಿಜಯಾ (45), ಪರ್ಯಾ (45), ಸುಜಾತ (38) ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಚಿಕಿತ್ಸೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಲಕ್ಷ್ಮಮ್ಮ ಎಂಬಾಕೆ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಕೂಲಿಕಾರ್ಮಿಕರಾಗಿದ್ದು, ಕೂಲಿಗಾಗಿ ಜಡೆ ಹೋಬಳಿ ತಲಗಡ್ಡೆಯಿಂದ ಚಂದ್ರಗುತ್ತಿ ಹೋಬಳಿ ಅಂಕರವಳ್ಳಿಗೆ ದಿನಾಲು ಮ್ಯಾಕ್ಸಿ ಕ್ಯಾಬ್'ನಲ್ಲಿ ಓಡಾಡುತ್ತಿದ್ದರು.
ಇಂದು ಕೂಡಾ ಕೆಲಸ ಮುಗಿಸಿ ವಾಪಸ್ಸು ಬರುತ್ತಿದ್ದಾಗ ಬೆನ್ನೂರು ಗ್ರಾಮದ ಕೆರೆ ಏರಿಯಲ್ಲಿ ಎದುರಿಗೆ ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಒಟ್ಟು 18 ಜನರಿದ್ದ ಮ್ಯಾಕ್ಸಿ ಕ್ಯಾಬ್ನಲ್ಲಿ ಉಳಿದವರಿಗೂ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸೊರಬ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಸೊರಬ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
