ಫೇಸ್’ಬುಕ್ ಪರಿಚಯದ ವಿವಾಹ ಕೊನೆಯವರೆಗೂ ಇರುವುದಿಲ್ಲ..

First Published 27, Jan 2018, 9:21 AM IST
Match made in heaven not Facebook
Highlights

ಫೇಸ್‌ಬುಕ್ ಮೂಲಕ ಪರಿಚಯವಾಗಿ ಹಸೆಣಮಣೆ ಏರುವ ಸಂಬಂಧಗಳು ಕೊನೆವರೆಗೂ ಉಳಿಯುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಹಮದಾಬಾದ್: ಫೇಸ್‌ಬುಕ್ ಮೂಲಕ ಪರಿಚಯವಾಗಿ ಹಸೆಣಮಣೆ ಏರುವ ಸಂಬಂಧಗಳು ಕೊನೆವರೆಗೂ ಉಳಿಯುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲ್ಲದೆ, ನವದಂಪತಿಗೆ ವಿಚ್ಛೇದನ ಪಡೆಯುವಂತೆಯೂ ಕೋರ್ಟ್ ಸಲಹೆ ನೀಡಿದೆ. ಪತಿ ಜೈದೀಪ್ ಶಾ ಮತ್ತು ಅತನ ಕುಟುಂಬಸ್ಥರು ನನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನವವಧು ಫಾನ್ಸಿ ಶಾ ಅವರು ದೂರು ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ ಕೋರ್ಟ್, ಫೇಸ್‌ಬುಕ್‌ನಲ್ಲಿ ಪರಿಚಯವಾಗುವ ಸಂಬಂಧ ಶಾಶ್ವತವಾಗಿ ಉಳಿಯುವುದಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ,’ ಎಂದು ಹೇಳಿತು.

loader