ನಿರ್ಮಾಪಕ ಕೆ. ಮಂಜು  ನೇತೃತ್ವದಲ್ಲಿ  ಸಮಸ್ಯೆ ಬಗೆಹರಿದಿದ್ದು, ಮಾಸ್ ಲೀಡರ್ ಚಿತ್ರದ ಟೈಟಲ್ ನಿರ್ಮಾಪಕ ತರುಣ್ ಶಿವಪ್ಪಗೆ ಸಿಕ್ಕಿದೆ.  

ಬೆಂಗಳೂರು(ಆ.07): ಶೀರ್ಷಿಕೆ ವಿವಾದದಿಂದಾಗಿ ಬಿಡುಗಡೆಗೆ ತೊಂದರೆಯಾಗಿದ್ದ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರಕ್ಕೆ ರಿಲೀಫ್ ಸಿಕ್ಕಿದೆ.

ನರಸಿಂಹ ಚಿತ್ರವನ್ನು ನಿರ್ದೇಶನ ಮಾಡಿದ್ದು, ತರುಣ್ ಶಿವಪ್ಪ ನಿರ್ಮಿಸಿದ್ದರು. ಈ ಹಿಂದೆ ಲೀಡರ್ ಚಿತ್ರದ ಟೈಟಲ್ ನನ್ನ ಎಎಮ್ಆರ್ ರಮೇಶ್ ಅವರು ರಿಜಿಸ್ಟರ್ ಮಾಡಿಸಿದ್ದರು. ಆದರೂ ಶಿವರಾಜ್ ಕುಮಾರ್ ಅಭಿನಯದ ಚಿತ್ರಕ್ಕೆ ಮಾಸ್ ಲೀಡರ್ ಅಂತ ಶಿರ್ಷಿಕೆ ಇಡಲಾಗಿತ್ತು. ಈ ಮಧ್ಯನೇ ಚಿತ್ರದ ಶಿರ್ಷಿಕೆಗೆ ಗೊಂದಲ ಮೂಡಿತ್ತು. ಸದ್ಯ ನಿರ್ಮಾಪಕ ಕೆ. ಮಂಜು ನೇತೃತ್ವದಲ್ಲಿ ಸಮಸ್ಯೆ ಬಗೆಹರಿದಿದ್ದು, ಮಾಸ್ ಲೀಡರ್ ಚಿತ್ರದ ಟೈಟಲ್ ನಿರ್ಮಾಪಕ ತರುಣ್ ಶಿವಪ್ಪಗೆ ಸಿಕ್ಕಿದೆ. ಮಾಸ್ ಲೀಡರ್ ಚಿತ್ರ ಇದೇ 11 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.