- Home
- News
- India News
- ನನ್ನ ಗಂಡ ಕ್ಯೂಟ್ ಇಲ್ಲ, ಆದ್ರೆ ವ್ಯಾಲೆಟ್ ಕ್ಯೂಟ್ ಆಗಿದೆ; ಜೀವನಕ್ಕೆ ಪತಿ ಸೌಂದರ್ಯ ಮುಖ್ಯವೇ ಅಲ್ಲ ಎಂದ ಪತ್ನಿ!
ನನ್ನ ಗಂಡ ಕ್ಯೂಟ್ ಇಲ್ಲ, ಆದ್ರೆ ವ್ಯಾಲೆಟ್ ಕ್ಯೂಟ್ ಆಗಿದೆ; ಜೀವನಕ್ಕೆ ಪತಿ ಸೌಂದರ್ಯ ಮುಖ್ಯವೇ ಅಲ್ಲ ಎಂದ ಪತ್ನಿ!
ತಾನು ಪತಿಯನ್ನು ಪ್ರೀತಿಸಿ ಮದುವೆಯಾಗಿಲ್ಲ, ಬದಲಾಗಿ ಆತನ ಹಣ ಮತ್ತು ಐಷಾರಾಮಿ ಜೀವನದ ಆಸೆ ಪೂರೈಸುವ ಶಕ್ತಿಗಾಗಿ ವರಿಸಿದ್ದೇನೆ ಎಂದು ಮಹಿಳೆಯೊಬ್ಬಳು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆಗಿದ್ದು, ಪ್ರೀತಿಗಿಂತ ಭೌತಿಕ ಆಸೆಗಳು ಮುಖ್ಯವಾಗುತ್ತಿವೆ ಎಂದಿದ್ದಾರೆ.

ಬೆಂಗಳೂರು (ಜ.21): ಇಲ್ಲೊಬ್ಬ ಮಹಿಳೆ 'ನಾನು ನನ್ನ ಪತಿಯನ್ನು ಪ್ರೀತಿಸಿ ಮದುವೆಯಾಗಿಲ್ಲ. ಆತ ಹಣವಂತ, ನನ್ನ ಭೌತಿಕ ಆಸೆಗಳನ್ನು ಪೂರೈಸುವ ಶಕ್ತಿ ಆತನಿಗಿದೆ, ಅದಕ್ಕಾಗಿಯೇ ನಾನು ಆತನನ್ನು ವರಿಸಿದೆ' ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲದೆ, 'ನಾನು ಆತನಿಗಿಂತ ಹೆಚ್ಚು ಸುಂದರಿ. ನಾವಿಬ್ಬರೂ ದಂಪತಿಗಳಾಗಿ ಅಷ್ಟು ಚೆನ್ನಾಗಿ ಕಾಣಿಸುವುದಿಲ್ಲ' ಎಂದು ಪತಿಯ ರೂಪವನ್ನೇ ಸಾರ್ವಜನಿಕವಾಗಿ ವ್ಯಂಗ್ಯವಾಡಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಸಲಿ ವಿಡಿಯೋ ಒಮ್ಮೆ ನೋಡಿ..
ವೈರಲ್ ವಿಡಿಯೋದಲ್ಲಿರುವ ಮಹಿಳೆ ಅತ್ಯಂತ ಹಸನ್ಮುಖಿಯಾಗಿ ತನ್ನ ಸಂಬಂಧದ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ಮದುವೆ ಎನ್ನುವುದು ಎರಡು ಮನಸ್ಸುಗಳ ಮಿಲನ, ಪ್ರೀತಿ-ವಿಶ್ವಾಸದ ಅಡಿಪಾಯ ಎಂಬ ಕಾಲ ಬದಲಾಗುತ್ತಿದೆಯೇ? ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದು ಇಂತಹದ್ದೊಂದು ಪ್ರಶ್ನೆಯನ್ನು ಸಮಾಜದ ಮುಂದೆ ಇಟ್ಟಿದೆ.
ತನ್ನ ಪತಿಯನ್ನು ಪ್ರೀತಿಸಿದ ಕಾರಣಕ್ಕಾಗಿ ಅಲ್ಲ, ಬದಲಾಗಿ ಆತ ತನ್ನ ಐಷಾರಾಮಿ ಜೀವನದ ಆಸೆಗಳನ್ನು ಪೂರೈಸುತ್ತಾನೆ ಎಂಬ ಕಾರಣಕ್ಕೆ ಮದುವೆಯಾಗಿದ್ದೇನೆ ಎಂದು ಮಹಿಳೆಯೊಬ್ಬಳು ಬಹಿರಂಗವಾಗಿ ಒಪ್ಪಿಕೊಂಡಿರುವುದು ಈಗ ಸಂಚಲನ ಮೂಡಿಸಿದೆ.
ಈ ವಿಡಿಯೋ ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ (X) ಸೇರಿ ಇತರೆ ವೇದಿಕೆಗಳಲ್ಲಿ ಹಂಚಿಕೆಯಾದ ಬೆನ್ನಲ್ಲೇ 'ಲಿಂಗ ತಾರತಮ್ಯ' ಮತ್ತು 'ಆಧುನಿಕ ಸಂಬಂಧಗಳ' ಕುರಿತು ದೊಡ್ಡ ಚರ್ಚೆ ಶುರುವಾಗಿದೆ.
ಒಬ್ಬ ಬಳಕೆದಾರ ಕಾಮೆಂಟ್ ಮಾಡುತ್ತಾ, 'ಸೌಂದರ್ಯ ಹುಡುಕುವ ಪುರುಷ (Beauty Digger) ಮತ್ತು ಹಣ ಹುಡುಕುವ ಮಹಿಳೆ (Gold Digger) ಈಗ ಜೊತೆಯಾಗಿ ಸುಖವಾಗಿದ್ದಾರೆ! ಪುರುಷರು ಮಹಿಳೆಯ ಸೌಂದರ್ಯ ಬಯಸಿದರೆ ಅದು ದೊಡ್ಡ ವಿಷಯವಾಗುವುದಿಲ್ಲ, ಆದರೆ ಮಹಿಳೆ ಪುರುಷನ ಹಣ ಬಯಸಿದರೆ ಅದನ್ನು ಮಾತ್ರ ಯಾಕೆ ದೊಡ್ಡದಾಗಿ ಬಿಂಬಿಸಲಾಗುತ್ತದೆ?' ಎಂದು ಪ್ರಶ್ನಿಸಿದ್ದಾರೆ.
ಈ ಘಟನೆಯು ಇಂದಿನ ತಲೆಮಾರಿನಲ್ಲಿ ಹೆಚ್ಚಾಗುತ್ತಿರುವ ಭೌತಿಕವಾದ (Materialism) ಮತ್ತು ಸಂಬಂಧಗಳಲ್ಲಿ ಮಾಯವಾಗುತ್ತಿರುವ ಪ್ರಾಮಾಣಿಕತೆಯನ್ನು ಎತ್ತಿ ತೋರಿಸುತ್ತಿದೆ. ಸೌಂದರ್ಯ ಮತ್ತು ಹಣದ ಮೇಲೆ ನಿಂತಿರುವ ಸಂಬಂಧಗಳು ಎಷ್ಟು ಕಾಲ ಬಾಳಿಕೆ ಬರುತ್ತವೆ ಎಂಬ ಆತಂಕವನ್ನು ಅನೇಕರು ವ್ಯಕ್ತಪಡಿಸಿದ್ದಾರೆ. ಹೆಂಡತಿಯ ಈ ಆಲೋಚನೆ ಕೇವಲ ವೈಯಕ್ತಿಕವಲ್ಲ, ಇದು ಸಮಾಜದ ಒಂದು ವರ್ಗದ ಬದಲಾದ ಮಾನಸಿಕತೆಯನ್ನು ಪ್ರತಿಬಿಂಬಿಸುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪ್ರೀತಿಗಿಂತ ಆರ್ಥಿಕ ಭದ್ರತೆಯೇ ಮುಖ್ಯ ಎಂದು ಭಾವಿಸುವ ಇಂತಹ ನಿಲುವುಗಳು ವೈವಾಹಿಕ ಜೀವನದ ಪಾವಿತ್ರ್ಯತೆಯನ್ನು ಹಾಳುಮಾಡುತ್ತವೆಯೇ ಎಂಬ ಚರ್ಚೆ ಈಗ ಜಗತ್ತಿನಾದ್ಯಂತ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

