Asianet Suvarna News Asianet Suvarna News

ಮಾರುತಿ ಸುಜುಕಿ ಹಿಂಸಾಚಾರದಲ್ಲಿ 31 ಮಂದಿ ಅಪರಾಧಿಗಳು ಎಂದು ಹರ್ಯಾಣ ಕೋರ್ಟ್ ತೀರ್ಪು

ಐದು ವರ್ಷಗಳ ಸತತ ಕಾನೂನು ಹೋರಾಟದ ಬಳಿಕ ಮಾರುತಿ ಸುಜುಕಿ ಮಾನೇಸರ್ ಹಿಂಸಾಚಾರ ಪ್ರಕರಣದಲ್ಲಿ 31 ಮಂದಿಯನ್ನು ಹರ್ಯಾಣ ನ್ಯಾಯಾಲಯ ಅಪರಾಧಿಗಳು ಎಂದು ತೀರ್ಪು ನೀಡಿದೆ.  117 ಜನರನ್ನು ಖುಲಾಸೆಗೊಳಿಸಿದೆ.

Maruti factory violence case 31 convicted 117 acquitted by Haryana court

ನವದೆಹಲಿ (ಮಾ.10): ಐದು ವರ್ಷಗಳ ಸತತ ಕಾನೂನು ಹೋರಾಟದ ಬಳಿಕ ಮಾರುತಿ ಸುಜುಕಿ ಮಾನೇಸರ್ ಹಿಂಸಾಚಾರ ಪ್ರಕರಣದಲ್ಲಿ 31 ಮಂದಿಯನ್ನು ಹರ್ಯಾಣ ನ್ಯಾಯಾಲಯ ಅಪರಾಧಿಗಳು ಎಂದು ತೀರ್ಪು ನೀಡಿದೆ.  117 ಜನರನ್ನು ಖುಲಾಸೆಗೊಳಿಸಿದೆ.

ತೀರ್ಪು ನೀಡುವ ಮುನ್ನ ಗುರ್ಗಾಂವ್ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. 9 ಮಂದಿ ಈಗಾಗಲೇ ಜೈಲುಶಿಕ್ಷೆ ಅನುಭವಿಸುತ್ತಿದ್ದು, 139 ಮಂದಿ ಜಾಮೀನಿನ ಮೇಲೆ ಹೊರಗಿದ್ದಾರೆ.

2012, ಜುಲೈ 18 ರಂದು ಮಾರುತಿ ಸುಜುಕಿ ಹಿಂಸಾಚಾರ ಘಟನೆ ನಡೆದಿದೆ. ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವೆ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ತಿರುಗಿ ಕಾರ್ಮಿಕರು ಕಟ್ಟಡದ ಒಂದು ಫ್ಲೋರ್ ಗೆ ಬೆಂಕಿ ಹಚ್ಚಿದರು. ಇದರಲ್ಲಿ ಎಚ್ ಆರ್ ಜನರಲ್ ಮ್ಯಾನೇಜರ್ ಅವನೀಶ್ ಕುಮಾರ್ ದೇವ್ ಮೃತಪಟ್ಟು ಸಾಕಷ್ಟು ಮಂದಿ ಗಾಯಗೊಂಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು 147 ಕಾರ್ಮಿಕರ ಮೇಲೆ ಚಾರ್ಜ್ ಶೀಟ್ ಹಾಕಿದ್ದರು.

ಸತತ 5 ವರ್ಷಗಳ ಕಾನೂನು ಹೋರಾಟದ ನಂತರ ಇವತ್ತು 31 ಮಂದಿಯನ್ನು ಅಪರಾಧಿಗಳು ಎಂದು ನ್ಯಾಯಾಲಯ ತೀರ್ಪು ನೀಡಿದೆ.  

Follow Us:
Download App:
  • android
  • ios