Asianet Suvarna News Asianet Suvarna News

ಸುಪ್ರೀಂ ಮಹತ್ವದ ಆದೇಶ: ಮುಸ್ಲಿಂ ಪುರುಷ, ಹಿಂದೂ ಮಹಿಳೆ ವಿವಾಹ ಅಕ್ರಮ... ಆದರೆ!

ಮುಸ್ಲಿಂ ಪುರುಷ, ಹಿಂದೂ ಮಹಿಳೆ ವಿವಾಹ ಅಕ್ರಮ: ಸುಪ್ರೀಂಕೋರ್ಟ್‌ ಮಹತ್ವದ ಆದೇಶ.

Marriage of Hindu woman and Muslim man irregular child born is legitimate
Author
New Delhi, First Published Jan 23, 2019, 8:30 AM IST

ನವದೆಹಲಿ[ಜ.23]: ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆಯ ನಡುವಿನ ವಿವಾಹ ಅಕ್ರಮ. ಇಂಥ ಸಂಬಂಧದಲ್ಲಿ ಪತ್ನಿಗೆ ಪತಿ ಆಸ್ತಿಯಲ್ಲಿ ಹಕ್ಕು ಇದೆಯೇ ವಿನಃ ವಂಶಪಾರಂಪರ್ಯವಾಗಿ ಪತಿಗೆ ಬಂದ ಆಸ್ತಿಯಲ್ಲಿ ಯಾವುದೇ ಹಕ್ಕು ಇರುವುದಿಲ್ಲ. ಆದರೆ ಈ ದಂಪತಿಗೆ ಹುಟ್ಟಿದ ಮಗು ಕಾನೂನು ಬದ್ಧ. ಹೀಗಾಗಿ ಮಗುವಿಗೆ ತಂದೆಯ ಎಲ್ಲಾ ಆಸ್ತಿಯ ಮೇಲೆ ಪೂರ್ಣ ಹಕ್ಕು ಇರುತ್ತದೆ ಎಂದು ಸ್ಪಷ್ಟಪಡಿಸಿದೆ.

ಕೇರಳದ ಮಹಮ್ಮದ್‌ ಎಲಿಯಾಸ್‌ ಮತ್ತು ವಲಿಯಮ್ಮ ದಶಕಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಪುತ್ರ ಕೂಡಾ ಇದ್ದ. ಈ ನಡುವೆ ಎಲಿಯಾಸ್‌ ಸಾವನ್ನಪ್ಪಿದ ಬಳಿಕ, ತಂದೆಗೆ ವಂಶಪಾರಂಪರ‍್ಯವಾಗಿ ಬಂದಿದ್ದ ಆಸ್ತಿಯಲ್ಲಿ ಪಾಲನ್ನು ಪುತ್ರ ಶಂಶುದ್ದೀನ್‌ ಕೇಳಿದ್ದ. ಆದರೆ ಮುಸ್ಲಿಂ ಕಾನೂನಿನ ಪ್ರಕಾರ, ಈ ವಿವಾಹವೇ ಅಸಿಂಧು. ಹೀಗಾಗಿ ಆಸ್ತಿಯನ್ನು ಕೊಡಲಾಗದು ಎಂದು ಎಲಿಯಾಸ್‌ ಸೋದರರು ವಾದಿಸಿದ್ದರು. ಆದರೆ ಈ ವಾದವನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಅವರು ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಈ ಕುರಿತು ತೀರ್ಪು ನೀಡಿದ ನ್ಯಾಯಾಲಯ, ಮುಸ್ಲಿಂ ಪುರುಷನನ್ನು ಅಗ್ನಿ ಮತ್ತು ವಿಗ್ರಹ ಆರಾಧಕರಾದ ಹಿಂದೂ ಮಹಿಳೆ ವಿವಾಹವಾದರೆ ಅದನ್ನು ಕಾನೂನುಬದ್ಧ ಎಂದು ಮುಸ್ಲಿಂ ಕಾನೂನು ಒಪ್ಪುವುದಿಲ್ಲ. ಹೀಗಾಗಿ ಈ ಮದುವೆ ಅಕ್ರಮ. ಆದರೆ ಈ ದಂಪತಿಗೆ ಹುಟ್ಟಿದ ಮಗು ಕಾನೂನುಬದ್ಧ. ಹೀಗಾಗಿ ಆತನಿಗೆ ತಂದೆಯ ಆಸ್ತಿ ಮತ್ತು ತಂದೆಗೆ ಆತನ ಕುಟುಂಬ ಕಡೆಯಿಂದ ಬಂದ ಆಸ್ತಿಯಲ್ಲಿ ಎಲ್ಲಾ ಪಾಲು ಸಿಗಬೇಕು ಎಂದು ಸ್ಪಷ್ಟಪಡಿಸಿದೆ.

Follow Us:
Download App:
  • android
  • ios