ಊಟದ ವಿಚಾರವಾಗಿ ಹೀಗೆ ಮಾಡುವವರು ಹುಡುಗಿಯನ್ನು ಕೊಡುವುದು ಬೇಡವೆಂದು ವಧುವಿನ ಕಡೆವರು ಮದುವೆಯನ್ನೇ ರದ್ದು ಮಾಡಿದ್ದಾರೆ.

ಬೆಂಗಳೂರು(ಏ. 09): ಮದುವೆ ಹಾಲ್'ನಲ್ಲಿ ಊಟದ ವಿಚಾರವಾಗಿ ಗಲಾಟೆಯಾಗಿ ವಿವಾಹ ಸಮಾರಂಭವೇ ರದ್ದಾಗಿಹೋದ ಘಟನೆ ಕೋಣನಕುಂಟೆಯಲ್ಲಿ ನಡೆದಿದೆ. ಇಲ್ಲಿಯ ಸೌಧಾಮಿನಿ ಛತ್ರದಲ್ಲಿ ಶಿಲ್ಪಾ ಮತ್ತು ನಾಗೇಂದ್ರ ಪ್ರಸಾದ್ ಜೋಡಿಯ ರಿಸೆಪ್ಷನ್ ವೇಳೆ ಈ ಘಟನೆ ನಡೆದಿದೆ. ಇಬ್ಬರ ಮದುವೆ ರದ್ದಾಗಲು ಊಟವೇ ಕಾರಣವೆಂಬ ಪ್ರಾಥಮಿಕ ಮಾಹಿತಿ ಮಾಧ್ಯಮಗಳಿಗೆ ಲಭಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಧು ಶಿಲ್ಪಾ ಅವರ ಕಡೆಯವರು ಹೇಳುವ ಪ್ರಕಾರ, ಆರತಕ್ಷತೆಯಲ್ಲಿ ವರನ ಕಡೆಯ 30 ಜನರಿಗೆ ಊಟ ಕಡಿಮೆಯಾಗಿದೆ. ಇದರಿಂದ ಗಂಡಿನ ಕಡೆಯವರು ದೊಡ್ಡ ಗಲಾಟೆ ಮಾಡಿದ್ದಾರೆ. ಊಟದ ವಿಚಾರವಾಗಿ ಹೀಗೆ ಮಾಡುವವರು ಹುಡುಗಿಯನ್ನು ಕೊಡುವುದು ಬೇಡವೆಂದು ವಧುವಿನ ಕಡೆವರು ಮದುವೆಯನ್ನೇ ರದ್ದು ಮಾಡಿದ್ದಾರೆ.