ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಎರಡನೇ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಮಗು ಜನಿಸಿರುವುದರಿಂದ ಜುಕರ್ ಮತ್ತು ಪ್ರೆಸಿಲ್ಲಾ ದಂಪತಿ ಎರಡನೇ ಮಗುವಿಗೆ ಆಗಸ್ಟ್ ಎಂದು ಹೆಸರಿಟ್ಟಿದ್ದಾರೆ.

ವಾಷಿಂಗ್ಟನ್(ಆ.29): ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಎರಡನೇ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಮಗು ಜನಿಸಿರುವುದರಿಂದ ಜುಕರ್ ಮತ್ತು ಪ್ರೆಸಿಲ್ಲಾ ದಂಪತಿ ಎರಡನೇ ಮಗುವಿಗೆ ಆಗಸ್ಟ್ ಎಂದು ಹೆಸರಿಟ್ಟಿದ್ದಾರೆ.

ಮೊದಲ ಪುತ್ರಿ ಮ್ಯಾಕ್ಸ್ ಮತ್ತು ಮಗುವಿನ ಜೊತೆಗಿರುವ ಫೋಟೋವನ್ನು ಜುಕರ್‌ಬರ್ಗ್ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಅಲ್ಲದೇ ಆಗಸ್ಟ್‌ಳನ್ನು ಸ್ವಾಗತಿಸಿ ಪತ್ರವೊಂದನ್ನು ಜುಕರ್‌ಬರ್ಗ್ ಬರೆದಿದ್ದಾರೆ. ಮಗುವಿನ ಜನನದ ಹಿನ್ನೆಲೆಯಲ್ಲಿ ಜುಕರ್ ಬರ್ಗ್ ಎರಡು ತಿಂಗಳ ಪಿತೃತ್ವ ರಜೆ ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.