ಬಿಜೆಪಿ ಶಾಸಕರೋರ್ವರು 5 ಕೋಟಿ ರು. ವಂಚಿಸಿದ್ದಾರೆ ಎಂದು ಆರೋಪ ಎದುರಾಗಿದೆ. ಈ ಬಗ್ಗೆ ನಕ್ಸಲರು ಪಾಂಪ್ಲೆಟ್ ಮಾಡಿ ಹಂಚಿ ಹೋಗಿದ್ದಾರೆ.  ಅಪನಗದೀಕರಣ ವೇಳೆ ಬಿಹಾರ ಬಿಜೆಪಿ ಶಾಸಕ ರಾಜನ್ ವಂಚಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. 

ಪಟನಾ: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಕ್ಸಲರು ಬಿಜೆಪಿ ವಿಧಾನಪರಿಷತ್ ಸದಸ್ಯ ರಾಜನ್ ಕುಮಾರ್ ರ ಚಿಕ್ಕಪ್ಪನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಪನಗದೀಕರಣ ವೇಳೆ ರಾಜನ್ ಹಣ ಬದಲಿಸಿಕೊಡುವುದಾಗಿ ತಮ್ಮಿಂದ 5 ಕೋಟಿ ರು. ಪಡೆದು ವಂಚಿಸಿದ್ದಾರೆ ಎಂದು ನಕ್ಸಲರು ಕರಪತ್ರ ಎಸೆದು ಹೋಗಿ ದ್ದಾರೆ. ಅಲ್ಲದೆ, ರಾಜನ್ ಅವರಿಂದ ಒಟ್ಟಾರೆ ತಮಗೆ 7 ಕೋಟಿ ರು. ಬರಬೇಕಿದೆ ಎಂದೂ ತಿಳಿಸಿದ್ದಾರೆ. 

ಆದರೆ ಇದನ್ನು ರಾಜನ್ ನಿರಾಕರಿಸಿದ್ದಾರೆ. ಶನಿವಾರ ರಾತ್ರಿ ರಾಜನ್ ಕುಮಾರ್ ಸಿಂಗ್ ಅವರ ಸೂಡಿ ಬಿಗಾಹಾ ಹಳ್ಳಿಯಲ್ಲಿನ ಮನೆಗೆ ಬಂದಿದ್ದ ನಕ್ಸಲರು ಅವರ ಚಿಕ್ಕಪ್ಪ ನರೇಂದ್ರ ಪ್ರಸಾದ್ ಸಿಂಗ್ (65) ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು.