ಆಂಧ್ರಪ್ರದೇಶದಲ್ಲಿ ದೋಣಿ ದುರಂತದಲ್ಲಿ 11 ಜನರ ದುರ್ಮರಣ| 50 ಪ್ರವಾಸಿಗರು ಮತ್ತು 11 ಸಿಬ್ಬಂದಿ ಇದ್ದ ಪ್ರವಾಸಿ ದೋಣಿ| ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದ ದುರ್ಘಟನೆ| ಯುದ್ದೋಪಾದಿಯಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಸಿಎಂ ಕಚೇರಿ ಜಿಲ್ಲಾಡಳಿತಕ್ಕೆ ಸೂಚನೆ|
ವಿಜಯವಾಡ(ಸೆ.15): ಪ್ರವಾಸಿ ದೋಣಿಯೊಂದು ಮುಗುಚಿದ ಪರಿಣಾಮ ಕನಿಷ್ಠ 11 ಜನ ಪ್ರವಾಸಿಗರು ದುರ್ಮರಣ ಹೊಂದಿದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಪ್ರವಾಸಿ ದೋಣಿಯಲ್ಲಿ 50 ಪ್ರವಾಸಿಗರು ಮತ್ತು 11 ಸಿಬ್ಬಂದಿ ಇದ್ದು, ಗೋದಾವರಿ ನದಿಯಲ್ಲಿ ಒಳಹರಿವು ಹೆಚ್ಚಾದ ಕಾರಣ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಲ್ಲಿನ ಗಂಡಿ ಪೋಚಮ್ಮ ದೇವಸ್ಥಾನದಿಂದ ಹೊರಟಿದ್ದ ಪ್ರವಾಸಿ ದೋಣಿ, ದೇವಿಪಟ್ಟಣಂ ಮಂಡಲದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಚಲೂರು ಮಂಡ ಗ್ರಾಮದ ಬಳಿ ನದಿಯಲ್ಲಿ ಮುಗುಚಿದೆ ಎಂದು ಹೇಳಳಾಗಿದೆ.
ಇದುವರೆಗೂ ಏಳು ಶವಗಳನ್ನುಹೊರತೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ರಾಂಪಚೋದವರಂ ಎಎಸ್ಪಿ ರಾಹುಲ್ ದೇವ್ ಸಿಂಗ್ ಹೇಳಿದ್ದಾರೆ.
ದೋಣಿಯು ಪ್ರಸಿದ್ದ ಪ್ರವಾಸಿ ಸ್ಥಳ ಪಾಪಿಕೊಂಡಲು ಅಥವಾ ಪಾಪಿ ಹಿಲ್ಸ್ ನತ್ತ ಸಾಗುತ್ತಿತ್ತು.ಇತ್ತೀಚಿನ ವರದಿಯಂತೆ ಹೆಚ್ಚಿನ ಪ್ರವಾಸಿಗರು ಲೈಫ್ ಜಾಕೆಟ್ ಧರಿಸಿದ್ದು 14 ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ವರದಿಗಳ ಪ್ರಕಾರ, 50 ಪ್ರವಾಸಿಗರು ಮತ್ತು 11 ಸಿಬ್ಬಂದಿಗಳನ್ನು ಹೊಂದಿರುವ ದೋಣಿ ಕೆಲವು ಪ್ರವಾಸಿಗರು ನೀರಿನ ಇನ್ನೊಂದು ಬದಿಯಲ್ಲಿರುವ ಟುಟುಕುಂಟಾ ಗ್ರಾಮದತ್ತ ಈಜಿ ದಡ ಸೇರಿದ್ದಾರೆ. ಇನ್ನೊಂದೆಡೆ ಗ್ರಾಮಸ್ಥರು 14 ಜನರನ್ನು ರಕ್ಷಿಸಿದ್ದಾರೆ.
ಸಿಎಂ ಕಛೇರಿ ಸಹ ಪೂರ್ವ ಗೋದಾವರಿ ಜಿಲ್ಲಾಡಳಿತದೊಂದಿಗೆ ಸಂಪರ್ಕ ಹೊಂದಿದ್ದು, ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
