ಕೇರಳಕ್ಕೆ ಅಪ್ಪಳಿಸಿದ ಮುಂಗಾರು; ರಾಜ್ಯದಲ್ಲಿ ಭಾರೀ ಮಳೆ

Manson in Kerala
Highlights

ದೇಶದ ಕೃಷಿ ಚಟುವಟಿಕೆ ಹಾಗೂ ಜಲ ಸಂಪನ್ಮೂಲದ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಮಾರುತಗಳು ಈ ಬಾರಿ ವಾಡಿಕೆಗಿಂತ ಮೂರು ದಿನ ಮೊದಲೇ ಕೇರಳಕ್ಕೆ ಮಂಗಳವಾರ ಅಪ್ಪಳಿಸಿವೆ. ಭಾರತೀಯ ಹವಾಮಾನ ಇಲಾಖೆ ಖಚಿತಪಡಿಸಿದೆ. ಕಳೆದ ವರ್ಷ ಕೂಡಾ ಮುಂಗಾರು  ಮಾರುತಗಳು ಮೇ 30 ಕ್ಕೇ ಕೇರಳ ಪ್ರವೇಶ ಮಾಡಿದ್ದವು.

ನವದೆಹಲಿ (ಮೇ. 30): ದೇಶದ ಕೃಷಿ ಚಟುವಟಿಕೆ ಹಾಗೂ ಜಲ ಸಂಪನ್ಮೂಲದ ಜೀವನಾಡಿಯಾಗಿರುವ ನೈಋತ್ಯ ಮುಂಗಾರು ಮಾರುತಗಳು ಈ ಬಾರಿ ವಾಡಿಕೆಗಿಂತ ಮೂರು ದಿನ ಮೊದಲೇ ಕೇರಳಕ್ಕೆ ಮಂಗಳವಾರ ಅಪ್ಪಳಿಸಿವೆ. ಭಾರತೀಯ ಹವಾಮಾನ ಇಲಾಖೆ ಖಚಿತಪಡಿಸಿದೆ. ಕಳೆದ ವರ್ಷ ಕೂಡಾ ಮುಂಗಾರು  ಮಾರುತಗಳು ಮೇ 30 ಕ್ಕೇ ಕೇರಳ ಪ್ರವೇಶ ಮಾಡಿದ್ದವು.

ಸಾಮಾನ್ಯವಾಗಿ ನಾಲ್ಕು ತಿಂಗಳು ಮಳೆ ಸುರಿಸುವ ನೈಋತ್ಯ ಮುಂಗಾರು ಮಾರುತಗಳು ಮೊದಲಿಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಸುರಿಸುತ್ತವೆ. ಜೂ. 1 ಪ್ರತಿವರ್ಷ ಈ ಮಳೆ ಮಾರುತದ ಆಗಮನದ ದಿನಾಂಕವಾಗಿದ್ದು, ಈ ಬಾರಿ ಮೂರು ದಿನ ಮೊದಲೇ ಆಗಮನವಾಗಿದೆ. ಮುಂಗಾರು ಮಾರುತಗಳು ಮಧ್ಯ ಅರಬ್ಬೀ ಸಮುದ್ರ, ಕೇರಳದ ಉಳಿದ ಭಾಗ, ಕರ್ನಾಟಕದ ಕರಾವಳಿ ಭಾಗದತ್ತ ಸಾಗಲು ಪೂರಕ ವಾತಾವರಣವಿದೆ. ಜೊತೆಗೆ ಮುಂದಿನ ೪೮ ಗಂಟೆಗಳಲ್ಲಿ ಈಶಾನ್ಯ ರಾಜ್ಯಗಳ ಕೆಲ ಭಾಗಗಳಲ್ಲೂ ಮಾರುತಗಳ ಮಳೆ ಸುರಿಸಲಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

ಈ ಬಾರಿ ವಾಡಿಕೆಯಂತೆ ಸಾಮಾನ್ಯ ಪ್ರಮಾಣದ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಡೀ ದೇಶದಲ್ಲಿ ಮುಂಗಾರು ಮಾರುತಗಳು ಹರಡಿ ಮಳೆ ಸುರಿಸಲು ಸುಮಾರು ಒಂದೂವರೆ ತಿಂಗಳು ಹಿಡಿಯುತ್ತದೆ. ಇನ್ನು, ಮಂಗಳವಾರವಲ್ಲ ಸೋಮವಾರವೇ ಕೇರಳಕ್ಕೆ ಮುಂಗಾರು ಮಾರುತಗಳ ಪ್ರವೇಶವಾಗಿದೆ ಎಂದು ಸರ್ಕಾರಿ ಹವಾಮಾನ ಇಲಾಖೆಯ ಪ್ರತಿಸ್ಪರ್ಧಿಯಾದ ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ಹೇಳಿದೆ.

ಕೇರಳಕ್ಕೆ ಮುಂಗಾರು ಪ್ರವೇಶವಾಗುತ್ತಿದ್ದಂತೆ ಕರ್ನಾಟಕದ ಕರಾವಳಿ, ಕೇರಳದ ಒಳನಾಡು ಪ್ರದೇಶ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾದಲ್ಲಿ ಬುಧವಾರ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

loader