ಪಣಜಿ(ಜು.11): ಗೋವಾದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಪ್ರತಿಕ್ರಿಯೆ ನೀಡಿರುವ ಗೋವಾ ಮಾಜಿ ಸಿಎಂ ದಿವಂಗತ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್, ರಾಜ್ಯದಲ್ಲಿ ನೈತಿಕ ರಾಜಕಾರಣ ತಮ್ಮ ತಂದೆಯ ಸಾವಿನೊಂದಿಗೆ ಕೊನೆಗೊಂಡಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಕಾಂಗ್ರೆಸ್ ಶಾಸಕರನ್ನು ಸೆಳೆದು ಸರ್ಕಾರ ಭದ್ರ ಮಾಡಿಕೊಳ್ಳುವ ಬಿಜೆಪಿ ತಂತ್ರಗಾರಿಕೆಯನ್ನು ಉತ್ಪಲ್ ತೀವ್ರವಾಗಿ ಟೀಕಿಸಿದ್ದಾರೆ. ಶಾಸಕರನ್ನು ಖರೀದಿಸುವ, ಬೆದರಿಸುವ ತಂತ್ರ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ತಂದೆ ಮನೋಹರ್ ಪರಿಕ್ಕರ್ ರಾಜ್ಯದಲ್ಲಿ ನೈತಿಕ ರಾಜಕಾರಣಕ್ಕೆ ಭದ್ರ ಬುನಾದಿ ಹಾಕಿದ್ದರು. ಆದರೆ ಅವರಿಲ್ಲದ ರಾಜ್ಯ ಬಿಜೆಪಿ ಘಟಕ ಇದೀಗ ಅವರ ಆದರ್ಶಗಳನ್ನು ಮರೆತಂತಿದೆ ಎಂದು ಉತ್ಪಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.