ಪಣಜಿ[ಜು. 10]  ಗೋವಾ ಪ್ರತಿಪಕ್ಷ ನಾಯಕ ಚಂದ್ರಕಾಂತ್ ಕವಲೇಕರ್ ನೇತೃತ್ವದಲ್ಲಿ 10 ಕಾಂಗ್ರೆಸ್ ಶಾಸಕರು ಬುಧವಾರ ಆಡಳಿತರೂಢ ಬಿಜೆಪಿ ಜೊತೆ ವಿಲೀನವಾಗಿದ್ದಾರೆ.

ಒಟ್ಟು 15 ಕಾಂಗ್ರೆಸ್ ಶಾಸಕರ ಪೈಕಿ 10 ಶಾಸಕರ ಬಣ ಇಂದು ಬಿಜೆಪಿಯೊಂದಿಗೆ ವಿಲೀನವಾಗಿದೆ. ಇದರೊಂದಿಗೆ 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯೆ 5ಕ್ಕೆ ಕುಸಿದಿದ್ದು, ಆಡಳಿತರೂಢ ಬಿಜೆಪಿ ಬಲ 17ರಿಂದ 27ಕ್ಕೆ ಏರಿಕೆಯಾಗಿದೆ. 2ರಲ್ಲಿ 3 ಭಾಗ ಶಾಸಕರು ಪಕ್ಷಾಂತರ ಮಾಡಿರುವುದರಿಂದ ಪಕ್ಷಾಂತರ ನಿಷೇಧ ಕಾಯಿದೆಯಿಂದ ವಿನಾಯಿತಿಪಡೆದುಕೊಂಡಿದ್ದಾರೆ. 

ವಿಧಾನಸೌಧದಲ್ಲಿ ಹೊಡಿ-ಬಡಿ,  ರಾಜೀನಾಮೆ ಕೊಟ್ಟ ಸುಧಾಕರ್‌ಗೆ ದಿಗ್ಬಂಧನ

ಕವಲೇಕರ್ ನೇತೃತ್ವದಲ್ಲಿ 10 ಕಾಂಗ್ರೆಸ್​ ಶಾಸಕರು ಇಂದು ಸಂಜೆ ಸ್ಪೀಕರ್ ರಾಜೇಶ್ ಪಟ್ನಾಕರ್  ಅವರನ್ನು ಭೇಟಿ ಮಾಡಿ, ವಿಲೀನ ಪತ್ರ ನೀಡಿದ್ದಾರೆ. ಚಂದ್ರಕಾಂತ್ ಕವಲೇಕರ್, ಫಿಲಿಪ್ ನೆರಿ ರಾಡ್ರಿಗೆಸ್, ಅಟನಾಸಿಯೋ ಆನ್ಸೆರಾಟ್ಟೆ, ಜೆನ್ನಿಫರ್ ಮಾನ್ಸೆರಾಟ್ಟೆ, ಫ್ರಾನ್ಸಿಸ್ ಸಿಲ್ವೇರಾ, ಕ್ಲಿಯೋಫೇಷಿಯೋ ಡಯಾಸ್, ವಿಲ್​ಫ್ರೆಡ್ ಡಿಸಾ, ನೀಲಕಂಠ್ ಹಲರನಕರ್, ಇಸಿಡೋರ್ ಫರ್ನಾಂಡಿಸ್ ಅವರು ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದಾರೆ.