ಪಣಜಿ[ಮಾ.17]: ಹಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಅವರ ಆರೋಗ್ಯ ಶನಿವಾರ ಇನ್ನಷ್ಟು ಕ್ಷೀಣಿಸಿದ್ದು, ಗಂಭೀರವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗೋವಾ ಸಚಿವ ವಿಜಯ್‌ ಸರ್ದೇಸಾಯಿ ಹಾಗೂ 5 ಮಂದಿ ಶಾಸಕರು ಪರ್ರಿಕರ್‌ ಅವರ ನಿವಾಸಿಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಇದೇ ವೇಳೆ ಗೋವಾ ಬಿಜೆಪಿ ಕೋರ್‌ ಕಮಿಟಿ ಸದಸ್ಯರು ಮತ್ತು ಶಾಸಕರು ತುರ್ತು ಸಭೆ ಕರೆದು ಚರ್ಚೆ ಪರ್ರಿಕರ್‌ ಅವರ ಆರೋಗ್ಯದ ಬಗ್ಗೆ ನಡೆಸಿದ್ದಾರೆ. ಒಂದು ವೇಳೆ ಬಿಕ್ಕಟ್ಟು ಉದ್ಭವಿಸಿದರೆ ಮುಂದೆ ಕೈಗೊಳ್ಳಬೇಕಾದ ರಾಜಕೀಯ ನಿರ್ಧಾರಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.

ಪರ್ರಿಕರ್‌ ಅವರು ಕಳೆದ ಕೆಲವು ತಿಂಗಳುಗಳಿಂದ ಮೇದೋಜೀರಕ ಗ್ರಂಥಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.