ಸೈಫುದ್ದೀನ್ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಸಿಂಗ್ ಬರಲ್ಲಕಾಶ್ಮೀರ ಕುರಿತ ಮುಷರಫ್ ಹೇಳಿಕೆ ಬೆಂಬಲ ಹಿನ್ನೆಲೆಸಮಾರಂಭದಿಂದ ದೂರ ಉಳಿಯಲಿರುವ ಸಿಂಗ್

ನವದೆಹಲಿ[ಜೂ.25): ಹಿರಿಯ ಕಾಂಗ್ರೆಸ್ ಮುಖಂಡ ಸೈಫುದ್ದೀನ್ ಸೊಜ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಪಾಲ್ಗೊಳ್ಳುತ್ತಿಲ್ಲ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

Add Asianetnews Kannada as a Preferred SourcegooglePreferred

ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪವ್ರೇಜ್ ಮುಷರಫ್ ಅವರ ನಿಲುವನ್ನು ಬೆಂಬಲಿಸಿದ್ದ ಕಾರಣದಿಂದ ಸೈಫುದ್ದೀನ್ ತೀವ್ರ ವಿರೋಧ ಎದುರಿಸುವಂತಾಗಿದೆ. ಅಲ್ಲದೇ ಸೈಫುದ್ದೀನ್ ಅವರ ಕಾಶ್ಮೀರ , 'ಗ್ಲೀಂಪ್ಸ್ ಆಫ್ ಇಸ್ಟರಿ ಆ್ಯಂಡ್ ದಿ ಸ್ಟೋರಿ ಆಫ್ ಸ್ಟ್ರಗಲ್' ಪುಸ್ತಕದಲ್ಲಿ ಕಾಶ್ಮೀರ ವಿಚಾರದಲ್ಲಿ ಮುಷರಪ್ ಅವರ ನಿಲುವು ಇಂದಿಗೂ ಸರಿಯಾಗಿ ಕಾಣುತ್ತಿದೆ ಎಂದು ಹೇಳಲಾಗಿದೆ.

ಕಾಶ್ಮೀರಿಗಳು ಪಾಕಿಸ್ತಾನದೊಂದಿಗೆ ಸೇರಬೇಡಿ, ಸ್ವತಂತ್ರಕ್ಕೆ ಮೊದಲ ಆದ್ಯತೆ ನೀಡಿ ಎಂದು ಮುಷರಪ್ ಹೇಳಿಕೆ ನೀಡಿದ್ದು, ಈಗಲೂ ಕೂಡ ಪ್ರಸ್ತುತದಿಂದ ಕೂಡಿದೆ. ಆದರೆ, ಅದು ಸಾಧ್ಯವಿಲ್ಲ ಎಂಬುದು ತಮಗೆ ಗೊತ್ತು ಎಂದು ಸಂದರ್ಶನವೊಂದರಲ್ಲಿ ಸೈಫುದ್ದೀನ್ ಸೊಜ್ ಹೇಳಿಕೆ ನೀಡಿದ್ದರು.

ಈ ಸಂಬಂಧಿತ ಲೇಖನಗಳು ನಾಳೆ ಬಿಡುಗಡೆಯಾಗಲಿರುವ ಕಾಶ್ಮೀರ ಕುರಿತ ಪುಸ್ತಕದಲ್ಲಿಯೂ ಇವೆ. ಹೀಗಾಗಿ ಡಾ.ಮನಮೋಹನ್ ಸಿಂಗ್ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.