ರೇವಣ್ಣ ಎದುರಾಳಿ ಸ್ಥಿತಿ ಅತಂತ್ರ

First Published 30, Mar 2018, 8:34 AM IST
Manjegowda Resignation not accepted
Highlights

ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಕಳೆದ ನವೆಂಬರ್ 2ರಂದೇ ರಾಜೀನಾಮೆ ಪತ್ರ ನೀಡಿದ್ದರೂ ಈವರೆಗೂ ಅಂಗೀಕಾರ ವಾಗಿಲ್ಲ.

ಬೆಂಗಳೂರು(ಮಾ.30): ಹೊಳೆನರಸೀಪುರದಿಂದ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಅವರು ಸರ್ಕಾರಿ ಹುದ್ದೆಗೆ ನೀಡಿರುವ ರಾಜೀನಾಮೆ ಪತ್ರ ಅಂಗೀಕಾರಕ್ಕೆ ಇನ್ನಿಲ್ಲದ ಕಸರತ್ತು ಮಾಡತೊಡಗಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಕಳೆದ ನವೆಂಬರ್ 2ರಂದೇ ರಾಜೀನಾಮೆ ಪತ್ರ ನೀಡಿದ್ದರೂ ಈವರೆಗೂ ಅಂಗೀಕಾರ ವಾಗಿಲ್ಲ. ಈ ಮಧ್ಯೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗಿರುವುದರಿಂದ ರಾಜೀನಾಮೆ ಪತ್ರವನ್ನು ತಕ್ಷಣ ಅಂಗೀಕರಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಜೇಗೌಡ ದುಂಬಾಲು ಬಿದ್ದಿದ್ದು, ಈಗ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜೀನಾಮೆ ಪತ್ರದ ಕಡತ ಹಣಕಾಸು ಇಲಾಖೆಯನ್ನು ತಲುಪಿದೆ.

ಅಂಗೀಕಾರ ತಡೆಗೆ ಜೆಡಿಎಸ್ ಯತ್ನ ವದಂತಿ: ಮಂಜೇಗೌಡ ಅವರು ಜೆಡಿಎಸ್‌ನ ಎಚ್.ಡಿ. ರೇವಣ್ಣ ವಿರುದ್ಧ ಕಾಂಗ್ರೆಸ್ಸಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಇದನ್ನು ತಡೆಯಲು ರಾಜೀನಾಮೆ ಪತ್ರ ಅಂಗೀಕಾರವಾಗದಂತೆ ಜೆಡಿಎಸ್ ಪ್ರಯತ್ನ ಮಾಡುತ್ತಿದೆ ಎಂಬ ವದಂತಿ ಸುಳಿದಾಡುತ್ತಿದೆ. ಈ ಹಿಂದೆ ಕೆಎಎಸ್ ಅಧಿಕಾರಿ ಯಾಗಿದ್ದ ವೀರಭದ್ರಯ್ಯ ಜೆಡಿಎಸ್‌ನಿಂದ ಮಧುಗಿರಿಯಲ್ಲಿ ಸ್ಪರ್ಧಿಸಲು ರಾಜೀನಾಮೆ ನೀಡಿದಾಗ ಬಿಜೆಪಿ ಸರ್ಕಾರ ಅಂಗೀಕರಿಸಿರಲಿಲ್ಲ.

loader