ಘಟನೆ ನಡೆದ ನಂತರ ಮುಖ್ಯಮಂತ್ರಿಯವರು ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದು ಪಡಿಸಿ ಸಂಪುಟ ಸಭೆಯ ತುರ್ತು ಸಭೆ ಹಮ್ಮಿಕೊಂಡರು

ಇಂಫಾಲ(24): ಮಣಿಪುರ ಮುಖ್ಯಮಂತ್ರಿ ಒಕ್ರಮ್ ಇಬೋಬಿ ಸಿಂಗ್ ಅವರು ಉಗ್ರರ ಗುಂಡಿನ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಉಕ್ರುಲ್ ಪ್ರದೇಶದ ಹೆಲಿಪ್ಯಾಡ್'ನಿಂದ ಇಳಿಯುತ್ತಿದ್ದಾಗ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಸಿಎಂ ಒಕ್ರಮ್ ಇಬೋಬಿ ಸಿಂಗ್ ಅವರಿಗೆ ಯಾವುದೇ ಅಪಾಯವಾಗಿಲ್ಲ. ಆದರೆ ಮಣಿಪುರ ರೈಫಲ್ಸ್'ನ ಒಬ್ಬ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾನೆ. ಉಗ್ರರು ದಾಳಿ ನಡೆಸಿದ ತಕ್ಷಣವೇ ಹೆಲಿಕಾಪ್ಟರ್ ಬೇರೆ ಕಡೆ ಸ್ಥಳಾಂತರವಾಯಿತು.

ಘಟನೆ ನಡೆದ ನಂತರ ಮುಖ್ಯಮಂತ್ರಿಯವರು ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದು ಪಡಿಸಿ ಸಂಪುಟ ಸಭೆಯ ತುರ್ತು ಸಭೆ ಹಮ್ಮಿಕೊಂಡರು. ಉಕ್ರುಲ್ ಜಿಲ್ಲೆಯಜಿಲ್ಲಾಸ್ಪತ್ರೆಯನ್ನು ಉದ್ಘಾಟನೆ ಮಾಡಬೇಕಿತ್ತು. ದಾಳಿಗೂ ಮುಂಚೆ ಮುಖ್ಯಮಂತ್ರಿ ಉದ್ಘಾಟಿಸಬೇಕಿದ್ದ ಆಸ್ಪತ್ರೆ ಸನಿಹದಲ್ಲಿ ಉಗ್ರರು ಬಾಂಬ್ ಸ್ಫೋಟಿಸಿದ್ದರು.ದಾಳಿ ನಡೆಸಿದ ಪರಿಣಾಮ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ.