ಐ ಸರ್ಚ್ ಮಾನಿಟರಿಂಗ್ ಕಂಪನಿ ಆಟೋ ಚಾಲಕರಿಗೆ ತರಬೇತಿ ಮತ್ತು ತಂತ್ರಜ್ಞಾನ ಒದಗಿಸಿದೆ

ಮಂಗಳೂರು(ಡಿ.26): ಇಲ್ಲಿನ ಆಟೋ ಚಾಲಕರು ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕನಸನ್ನು ನನಸು ಮಾಡಲು ಹೊರಟಿದ್ದಾರೆ. ಕ್ಯಾಶ್ ಇಲ್ಲದೆ ಆಟೋ ಪ್ರಯಾಣ ಮಾಡುವಂತಿಲ್ಲ ಎನ್ನುವವರಿಗೆ ಕುಡ್ಲ ಸೌಹಾರ್ದ ಸಂಘದ ಮೂಲಕ ಆಟೋ ಚಾಲಕರು ಉದಾಹರಣೆ. ಇದು ಮಂಗಳೂರಿನ ಆಟೋ ಸರ್ವಿಸ್. ಇಲ್ಲಿ 200ಕ್ಕೂ ಹೆಚ್ಚು ಆಟೋಗಳು ಪೇಟಿಎಂ ಮಾಡಿಕೊಂಡಿವೆ. ಪ್ರಧಾನಿ ಮೋದಿಯ ಡಿಜಿಟಲ್ ಇಂಡಿಯಾ ಕನಸು ನನಸು ಮಾಡುವ ಯೋಜನೆಗೆ ಕೈ ಜೋಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಲೋ ಕುಡ್ಲ ಅನ್ನೋ ಌಪ್ ಮೂಲಕ ಆಟೋ ಚಾಲಕರು ಗ್ರಾಹಕರನ್ನು ಆಕರ್ಷಿಸಲು ಹೊರಟಿದ್ದಾರೆ. ಐ ಸರ್ಚ್ ಮಾನಿಟರಿಂಗ್ ಕಂಪನಿ ಆಟೋ ಚಾಲಕರಿಗೆ ತರಬೇತಿ ಮತ್ತು ತಂತ್ರಜ್ಞಾನ ಒದಗಿಸಿದೆ. ಕೇವಲ ವ್ಯವಹಾರಕ್ಕಷ್ಟೇ ಅಲ್ಲ, ಗ್ರಾಹಕರನ್ನು ಸೆಳೆಯುವುದರ ಜೊತೆಗೆ, ಇತರರಿಗೂ ಜಾಗೃತಿ ಮೂಡಿಸುತ್ತಿದ್ದಾರೆ ಈ ಚಾಲಕರು.