ಮಂಡ್ಯ [ ಆ.12]: ಅತೃಪ್ತರಾಗಿ ರಾಜೀನಾಮೆ ನೀಡಿ ಅನರ್ಹರಾದ ಕೆ.ಆರ್ ಪೇಟೆ ಶಾಸಕ ನಾರಾಯಣ ಗೌಡ ಉಪ ಚುನಾವಣೆ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದಾರೆ. 

ಮಂಡ್ಯದಲ್ಲಿ ಮಾತನಾಡಿದ ನಾರಾಯಣ ಗೌಡ ಜನರ ನಿರ್ಧಾರ ಕೇಳಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು. ಅಲ್ಲದೇ ಈಗಿನ ಮುಖ್ಯಮಂತ್ರಿ ನಮ್ಮ ತಾಲೂಕಿನವರೇ ಆಗಿದ್ದು, ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ಇದೆ ಎಂದರು. 

ರಾಜೀನಾಮೆಗೆ ಕಾರಣ ಬಿಚ್ಚಿಟ್ಟ KR ಪೇಟೆ ಅನರ್ಹ ಶಾಸಕ

ತಾಲೂಕಿನ ಮಗನಾಗಿ ಸಿಎಂ ಯಡಿಯೂರಪ್ಪ ಅಭಿವೃದ್ಧಿಗೆ ಒತ್ತು ನೀಡಲಿದ್ದಾರೆ ಎಂದು ಹೊಗಳಿದ ನಾರಾಯಣ ಗೌಡ BSY ಹೊಗುಳವ ಮೂಲಕ ಬಿಜೆಪಿ ಸೇರುವ ಮುನ್ಸೂಚನೆ ನೀಡಿದರಾ ಎನ್ನಲಾಗುತ್ತಿದೆ. 

ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ನಾರಾಯಣಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ನನ್ನನ್ನು ಕ್ರಿಮಿನಲ್ ಅನ್ನುತ್ತಾರೆ. ಆದರೆ ಯಾರು ಕ್ರಿಮಿನಲ್ ಎನ್ನವುದು ಸಂದರ್ಭ ಬಂದಾಗ ತಿಳಿಯುತ್ತೆ. ಇದಕ್ಕೆ ಸಾಕ್ಷಿ ನೀಡಲಿ ಎಂದರು. 

ಇನ್ನು ಮಾಜಿ ಸಚಿವ ಪುಟ್ಟರಾಜು ಅವರೂ ಕೂಡ ತಮ್ಮ ಪಕ್ಷದ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂದು ಈ ವೇಳೆ ನಾರಾಯಣ ಗೌಡ ಹೇಳಿದರು.