ಕಾಂಗ್ರೆಸ್ ರೆಬಲ್ ಮುಖಂಡ ಜೆಡಿಎಸ್'ಗೆ

ಬೆಂಗಳೂರು(ಆ.26): ಕಾಂಗ್ರೆಸ್'ನ ರೆಬಲ್ ಮುಖಂಡ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್'ಗೆ ಸೇರುವುದು ಖಚಿತವಾದಂತಿದೆ. ಶ್ರೀರಂಗಪಟ್ಟಣದ ಕಾಂಗ್ರೆಸ್ ಮುಖಂಡರಾಗಿದ್ದ ಇವರು ಎಸ್.ಎಂ. ಕೃಷ್ಣ ಬಿಜೆಪಿ ಸೇರ್ಪಡೆಯ ನಂತರ ಕಾಂಗ್ರೆಸ್ ಪಕ್ಷ ತೊರೆದಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರವೀಂದ್ರ ಅವರು ಜೆಡಿಎಸ್ ಸೇರ್ಪಡೆಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಸಮ್ಮತಿ ವ್ಯಕ್ತಪಡಿಸಿದ್ದು, ಸಂಸದ ಪುಟ್ಟರಾಜು ನೇತೃತ್ವದಲ್ಲಿ ಬೆಂಗಳೂರಿನ ಪದ್ಮನಾಭ ನಗರದಲ್ಲಿ ದೇವೇಗೌಡರ ಜೊತೆ ಮಾತುಕತೆ ಯಶಸ್ವಿಯಾಗಿದೆ ಎನ್ನಲಾಗಿದೆ. ರವೀಂದ್ರ ಶ್ರೀಕಂಠಯ್ಯ ಶ್ರೀರಂಗಪಟ್ಟಣ ಕ್ಷೇತ್ರದ ಕೆಪಿಸಿಸಿ ಮುಖಂಡರಾಗಿದ್ದರು. ಸೆಪ್ಟೆಂಬರ್ 23 ರಂದು ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಬಹಿರಂಗ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

(ಸಾಂಧರ್ಭಿಕ ಚಿತ್ರ)