ಅವರಿಬ್ಬರೂ ಕಳೆದ ಹತ್ತು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡ್ತಿದ್ರು. ಬಳಿಕ ಮದುವೆ ಕೂಡ ಆದ್ರು. ಅವರ ಪ್ರೀತಿಗೆ ಸಾಕ್ಷಿ ಎಂಬಂತೆ ಒಂದು ಗಂಡು ಮಗು ಕೂಡ ಇದೆ. ಆದ್ರೆ ಪ್ರೀತಿಸಿ ಮದುವೆಯಾದ ಹೆಂಡತಿಗೆ ಕೈ ಕೊಟ್ಟ ಗಂಡ ಮೋಸ ಮಾಡಿ ಮತ್ತೊಬ್ಬಳನ್ನ ಮದುವೆಯಾಗಿ ತಲೆಮರೆಸಿಕೊಂಡಿದ್ದ. ಆದರೆ ವಿಷಯ ತಿಳಿದ ಮೊದಲ ಹೆಂಡತಿ ಬುರ್ಕಾ ಹಾಕಿಕೊಂಡು ಮಂಗಳಾರತಿ ಮಾಡಿದ್ದಾಳೆ.

ಚಿತ್ರದುರ್ಗ(ಫೆ.02): ಅವರಿಬ್ಬರೂ ಕಳೆದ ಹತ್ತು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡ್ತಿದ್ರು. ಬಳಿಕ ಮದುವೆ ಕೂಡ ಆದ್ರು. ಅವರ ಪ್ರೀತಿಗೆ ಸಾಕ್ಷಿ ಎಂಬಂತೆ ಒಂದು ಗಂಡು ಮಗು ಕೂಡ ಇದೆ. ಆದ್ರೆ ಪ್ರೀತಿಸಿ ಮದುವೆಯಾದ ಹೆಂಡತಿಗೆ ಕೈ ಕೊಟ್ಟ ಗಂಡ ಮೋಸ ಮಾಡಿ ಮತ್ತೊಬ್ಬಳನ್ನ ಮದುವೆಯಾಗಿ ತಲೆಮರೆಸಿಕೊಂಡಿದ್ದ. ಆದರೆ ವಿಷಯ ತಿಳಿದ ಮೊದಲ ಹೆಂಡತಿ ಬುರ್ಕಾ ಹಾಕಿಕೊಂಡು ಮಂಗಳಾರತಿ ಮಾಡಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿತ್ರದುರ್ಗ ತಾಲೂಕಿನ ಮೆದೆಹಳ್ಳಿ ಗ್ರಾಮದ ಸಹನಾ ಹತ್ತು ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಗುರುಮೂರ್ತಿಯನ್ನು ಮದುವೆಯಾಗಿದ್ದ. ಆದರೂ ಗುರುಮೂರ್ತಿ ಈಕೆಯನ್ನು ಬಿಟ್ಟು ಈಗ ಮತ್ತೊಬ್ಬಳನ್ನು ಮದುವೆ ಮಾಡಿಕೊಂಡಿದ್ದಾನೆ. ಇದರಿಂದ ಬೇಸತ್ತ ಸಹನಾ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದರೂ ನ್ಯಾಯ ಸಿಕ್ಕಿಲ್ಲ.

ನಿನ್ನೆ ರಾತ್ರಿ ಸ್ನೇಹಿತನ ಮನೇಲಿ ಪಾರ್ಟಿ ಮಾಡ್ಕೊಂಡು ಮಜಾ ಮಾಡುತ್ತಿದ್ದ ಗಂಡನ ಬಗ್ಗೆ ಮಾಹಿತಿ ಸಿಕ್ಕಿದೆ. ಅಲ್ಲಿಗೆ ಸಹನಾ ಬುರ್ಕಾ ಹಾಕಿಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾಳೆ.