ಚೀನಾದ ಗ್ಯಾಸ್ ಬಂಕ್'ಗೇ ಬೆಂಕಿ ಹಚ್ಚಿದ ಬೈಕ್ ಸವಾರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಸಿಬ್ಬಂದಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬೆಂಕಿ ನಂದಿಸುವುದರೊಂದಿಗೆ ಸವಾರನನ್ನೂ ಕಾಪಾಡಿದ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಇವರ ಈ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿದ್ದಲ್ಲದೇ 61 ಲಕ್ಷ ನಗದು ಬಹುಮಾನವೂ ನೀಡಲಾಗಿದೆ.

ಬೀಜಿಂಗ್(ಮೇ.27): ಚೀನಾದ ಗ್ಯಾಸ್ ಬಂಕ್'ಗೇ ಬೆಂಕಿ ಹಚ್ಚಿದ ಬೈಕ್ ಸವಾರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಸಿಬ್ಬಂದಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬೆಂಕಿ ನಂದಿಸುವುದರೊಂದಿಗೆ ಸವಾರನನ್ನೂ ಕಾಪಾಡಿದ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಇವರ ಈ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿದ್ದಲ್ಲದೇ 61 ಲಕ್ಷ ನಗದು ಬಹುಮಾನವೂ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೀನಾಸ ಸಿಚುವಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಗ್ಯಾಸ್ ಬಂಕ್'ನಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿವೆ. ಈ ದೃಶ್ಯಗಳಲ್ಲಿ ಬೈಕ್ ಸವಾರ ಮೊದಲಿಗೆ ತನ್ನ ಬೈಕ್'ನ ಪೆಟ್ರೋಲ್ ಟ್ಯಾಂಕ್ ಓಪನ್ ಮಾಡಿ ಲೈಟರ್ ಮೂಲಕ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಆದರೆ ಗ್ಯಾಸ್ ಬಂಕ್ ಸಿಬ್ಬಂದಿ ಇದನ್ನು ಗಮನಿಸಿ ಬೈಕ್ ಸವಾರನ ಕೈಯ್ಯಲ್ಲಿದ್ದ ಲೈಟರ್ ಕಸಿದು ದೂರಕ್ಕೆಸೆದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಇಷ್ಟಕ್ಕೇ ಸುಮ್ಮನಾಗದ ಬೈಕ್ ಸವಾರ ಬೈಕ್'ನ್ನೇ ಬೆಂಕಿಯ ಮೇಲುರುಳಿಸುತ್ತಾನೆ. ಬೈಕ್ ಟ್ಯಾಂಕ್'ನಲ್ಲಿದ್ದ ಪೆಟ್ರೋಲ್'ಗೆ ಬೆಂಕಿ ಹಚ್ಚಿಕೊಂಡಿದ್ದು, ಬೈಕ್ ಬೆಂಕಿಗಾಹುತಿಯಾಗುತ್ತದೆ. ಆ ಹೊತ್ತಿಗಾಗಲೇ ಬೈಕ್ ಸವಾರ ಬೆಂಕಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಾನೆ.

ಆದರೆ ಅಷ್ಟೊತ್ತಿಗಾಗಲೇ ಅಪಾಯದ ಅರಿವಾಗಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಬೈಕ್ ಸವಾರನನ್ನು ಬೆಂಕಿಯಿಂದ ಹೊರಗೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ಸಾಮಾಝಿಕ ಜಾಲಾತಾಣಗಲ್ಲಿ ಈ ವಿಡಿಯೋ ಭಾರೀ ಸದ್ದು ಮಾಡಿದ್ದು, ಪ್ರೇಕ್ಷಕರೆಲ್ಲರೂ ಬೈಕ್ ಸವಾರನನ್ನು ಟೀಕಿಸಿದ್ದಾರೆ ಹಾಗೂ ಸಿಬ್ಬಂದಿಗಳ ಸಮಯಪ್ರಜ್ಞೆಗೆ ತಲೆದೂಗಿದ್ದಾರೆ.