ಲಂಡನ್(ಸೆ.14): ಇತ್ತೀಚೆಗೆ ಆನ್ಲೈನ್ ಶಾಪಿಂಗ್ ಜೋರಾಗಿದೆ. ವಸ್ತುಗಳ ಮಾರಾಟ ಹಾಗೂ ಖರೀದಿಗೆ ಗ್ರಾಹಕರು ಆನ್ಲೈನ್ ವೆಬ್ಸೈಟ್ ಬಳಸುತ್ತಾರೆ. ಆದರೆರೆ ಇಂಗ್ಲೆಂಡ್ನಲ್ಲೊಬ್ಬ ವ್ಯಕ್ತಿ ತನ್ನ ಹೆಂಡತಿಯನ್ನೇ ಆನ್ಲೈನ್ ವೆಬ್ಸೈಟ್ನಲ್ಲಿ ಮಾರಾಟಕ್ಕಿಟ್ಟಿದ್ದಾನೆ. ಆನ್ಲೈನ್ ವೆಬ್ಸೈಟ್ನಲ್ಲಿ ಪತ್ನಿ ಫೋಟೋ ಹಾಕಿರುವ ಗಂಡ ಮಾರಾಟದ ಜಾಹೀರಾತು ಹಾಕಿದ್ದಾನೆ.
ಸೈಮನ್ ಓ ಕೇನ್ ಎಂಬಾತನೇ ಪತ್ನಿಯನ್ನು ಮಾರಾಟಕ್ಕಿಟ್ಟ ಭೂಪ. 27 ವರ್ಷದ ಪತ್ನಿ ಲಂಡ್ರಾ ಫೋಟೋವನ್ನು ಆನ್ಲೈನ್ ಶಾಪಿಂಗ್ ವೆಬ್ಸೈಟ್ ಇಬೇಯಲ್ಲಿ ಸೈಮನ್ ಅಪ್ ಲೋಡ್ ಮಾಡಿದ್ದಾನೆ. ಎರಡು ದಿನದಲ್ಲಿ ಲಂಡ್ರಾ ಬೆಲೆ 65,880 ಪೌಂಡ್ಗೆ ಏರಿಕೆಯಾಗಿದೆ. ಸೈಮನ್ ಪತ್ನಿಯನ್ನು ಮಾರಾಟ ಮಾಡಲು ಕಾರಣ ಏನು ಎಂಬುದನ್ನೂ ಹಾಕಿದ್ದಾನೆ.
ಎರಡು ಮಕ್ಕಳ ತಾಯಿಯಾಗಿರುವ ಲಂಡ್ರಾ ಪತ್ನಿಯ ಕೆಲಸವನ್ನು ಸಮರ್ಥವಾಗಿ ಮಾಡ್ತಿಲ್ಲ. ಅನುಕಂಪವಿಲ್ಲದ ಪತ್ನಿ ಎಂದು ಜಾಹೀರಾತಿನಲ್ಲಿ ಹೇಳಿದ್ದಾನೆ. ಹಾಗೆ ಪತ್ನಿಯ ಅಡುಗೆ ಮನೆಯ ಸ್ಕಿಲ್ ಹಾಗೂ ಆಕೆಯ ಸೌಂದರ್ಯವನ್ನು ಹೊಗಳಿದ್ದಾನೆ. ಪತ್ನಿಯನ್ನು ಖರೀದಿಸಿದವರು ವಾಪಸ್ ಮಾಡುವಂತಿಲ್ಲ ಎಂಬ ಸಂದೇಶವನ್ನೂ ಹಾಕಿದ್ದಾನೆ.
