ನೋಯ್ಡಾ: ದುಶ್ಚಟಗಳು ವ್ಯಕ್ತಿ ಎಷ್ಟೇ ಐಶಾರಾಮಿ ಸ್ಥಿತಿಯಲ್ಲಿದ್ದರೂ ಹೇಗೆಲ್ಲ ಅಪಾಯಕ್ಕೆ ಕಾರಣವಾಗಬಹುದು ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ಐಷಾರಾಮಿ ಕಾರು ಜಾಗ್ವಾರ್ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ದಾರಿ ಮಧ್ಯೆ ತಿಂದಿದ್ದ ಗುಟ್ಕಾ ಉಗಿಯಲು ಹೋಗಿ, ಕಾರು ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದಾನೆ. 

ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇನಲ್ಲಿ ಪ್ರಶಾಂತ್(27) ಎಂಬಾತ ಸುಮಾರು ಗಂಟೆಗೆ 120 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸುತ್ತಿದ್ದ. ಈ ವೇಳೆ ಆತ ತಲೆ ಹೊರಹಾಕಿ ಗುಟ್ಕಾ ಉಗಿಯಲು ಯತ್ನಿಸಿದ್ದು, ಕಾರು ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.