ಥೈಲ್ಯಾಂಡ್(ನ.19): ಐದು ವರ್ಷಗಳ ಹಿಂದೆ ಪ್ರೇಯಸಿಯನ್ನು ಕಳೆದುಕೊಂಡಿರುವ ವ್ಯಕ್ತಿಯೊಬ್ಬ ಹಾವಿನ ಜೊತೆ ಮದುವೆಯಾಗಿದ್ದಾನೆ.

ಇಂಥದ್ದೊಂದು ಅಪರೂಪದ ಘಟನೆ ನಡೆದಿರುವುದು ಥೈಲ್ಯಾಂಡ್‌'‌ನ ವೊರ್ರಾನ್ ಪ್ರದೇಶದಲ್ಲಿ. ಸಾವನ್ನಪ್ಪಿದ್ದ ಪ್ರೇಯಸಿ ಹಾವಿನ ರೂಪದಲ್ಲಿ ಜನ್ಮ ತಾಳಿದ್ದಾಳೆ ಎಂಬ ನಂಬಿಕೆಯಿಂದ ಹಾವಿನ ಜೊತೆ ಮದುವೆಯಾಗಿದ್ದಾನೆ. ಅಷ್ಟೇ ಅಲ್ಲ ಹಾವಿನೊಂದಿಗೆ ಸಿಂಗಾಪೂರಕ್ಕೆ ತೆರಳಿ ಹನಿಮೂನ್ ಸಹ ಮುಗಿಸಿಕೊಂಡು ಬಂದಿದ್ದಾನಂತೆ.

ಈಗಲೂ ಹಾವಿನೊಂದಿಗೆ ಸಂಸಾರ ಮುಂದುವರಿಸಿದ್ದು, ನಿತ್ಯವೂ ಊಟ, ನಿದ್ದೆ, ಹೀಗೆ ಎಲ್ಲ ಸಮಯವನ್ನೂ ಹಾವಿನೊಂದಿಗೇ ಕಳೆಯುತ್ತಿದ್ದಾನೆ. ಹಾವಿನೊಂದಿಗೆ ಸಂಸಾರ ಮಾಡುತ್ತಿರುವುದನ್ನು ನೋಡಿದ ಅನೇಕರು ಆತನಿಂದ ದೂರ ಉಳಿದ್ದಾರೆ.