ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಕೌಂಟರ್| ಹಿಂದು ಹೆಣ್ಣನ್ನು ಮುಟ್ಟಿದ ಕೈ ಕಡಿಯವುದಾಗಿ ಅನಂತ್ ಬೆದರಿಕೆ| ಅನಂತ್ ಕುಮಾರ್ ಹೇಳಿಕೆಗೆ ತೀವ್ರ ಆಕ್ರೋಶ| ಹಿಂದು ಪತ್ನಿಯ ಮೇಲೆ ಕೈ ಹಾಕಿ ಅನಂತ್ ಗೆ ಸವಾಲ್| ತೆಹಸೀನ್ ಪೂನಾವಾಲಾ ಎಂಬ ವ್ಯಕ್ತಿಯಿಂದ ಅನಂತ್ ಗೆ ಚಾಲೆಂಜ್

ನವದೆಹಲಿ(ಜ.29): ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ‘ಹಿಂದು ಹೆಣ್ಣನ್ನು ಮುಟ್ಟುವ ಕೈಗಳನ್ನು ಕಡಿದು ಹಾಕಬೇಕು’ ಎಂಬ ಹೇಳಿಕೆ ತೀವ್ರ ವಿವಾದವನ್ನು ಸೃಷ್ಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನಂತ್ ಮಾತೆತ್ತಿದ್ರೆ ಸಮಾಜವನ್ನು ಒಡೆಯುವ, ಸಮಾಜದಲ್ಲಿ ಅಶಾಂತಿ ಹರಡುವ ಕೆಲಸವನ್ನೇ ಮಾಡುತ್ತಾರೆ ಎಂದು ಹಲವರು ಅವರ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ಈ ಮಧ್ಯೆ ಹಿಂದು ಹೆಣ್ಣನ್ನು ಮುಟ್ಟುವ ಕೈಗಳನ್ನು ಕಡಿಯುತ್ತೀವಿ..ಎಂಬ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆ ಹಿಂದು-ಮುಸ್ಲಿಂ ಜೋಡಿಯೊಂದು ಚಾಲೆಂಜ್ ಮಾಡಿದೆ.

Scroll to load tweet…

ಹೌದು, ಅನಂತ್ ಅವರ ಹೇಳಿಕೆ ವಿರೋಧಿಸಿ ತೆಹಸೀನ್ ಪೂನಾವಾಲಾ ಎಂಬುವವರು ಟ್ವೀಟ್ ಮಾಡಿದ್ದು, ಅದರಲ್ಲಿ ತಮ್ಮ ಹಿಂದು ಪತ್ನಿಯ ಜೊತೆ ಇರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.

‘ಅನಂತ್ ಅವರೇ ನಾನು ಹಿಂದು ಹೆಣ್ಣನ್ನು ಮುಟ್ಟಿದ್ದೇನೆ, ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ. ಇದು ನನ್ನ ಚಾಲೆಂಜ್ ಎಂದು ತೆಹಸೀನ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ.

‘ಹಿಂದು ಹುಡುಗಿ ಮೈ ಮುಟ್ಟಿದ ಕೈ ಇರಬಾರದು'