ಕ್ಯಾಲಿಫೋರ್ನಿಯಾ(ಜ.09): ಆ ಮನೆಯ ಒಳಗಡೆ ತುಂಬಿದ ಕುಟುಂಬವೊಂದು ಹಾಯಾಗಿ ಮಲಗಿ ನಿದ್ದೆ ಮಾಡುತ್ತಿತ್ತು. ಆದರೆ ಮನೆಯ ಹೊರಗಡೆ ವ್ಯಕ್ತಿಯೋರ್ವ ಸತತ ಮೂರು ಗಂಟೆಗಳ ಕಾಲ ಡೋರ್ ಬೆಲ್ ನೆಕ್ಕುತ್ತಾ ನಿಂತಿದ್ದು ಕಂಡು ಬಂದ ನಿದ್ದೆಯೂ ಹಾರಿ ಹೋಗಿತ್ತು.

ಹೌದು, ಇಲ್ಲಿನ ಸಲಿನಾಸ್ ನಲ್ಲಿರುವ ಡಂಗನ್ಸ್ ಎಂಬಾತನ ಮನೆಗೆ ರಾತ್ರಿ ವೇಳೆ ನುಗ್ಗಿದ ಅಪರಿಚತನೋರ್ವ, ಸತತ ಮೂರು ಗಂಡೆಗಳ ಕಾಲ ಡೊರ್ ಬೆಲ್ ನೆಕ್ಕುತ್ತಾ ನಿಂತಿದ್ದಾನೆ.

ಆಗುಂತಕನೋರ್ವ ಈ ರೀತಿ ವಿಚಿತ್ರ ವರ್ತನೆ ತೋರುತ್ತಿರುವ ದೃಶ್ಯ ಡಂಗನ್ಸ್ ಮನೆಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಡಂಗನ್ಸ್ ಕುಟುಂಬ ನಿಜಕ್ಕೂ ಬೆಚ್ಚಿ ಬಿದ್ದಿದೆ.

ಇನ್ನು ಡಂಗನ್ಸ್ ನೀಡಿದ ದೂರನ್ನು ಸ್ವೀಕರಿಸಿರುವ ಪೊಲೀಸರು ಕ್ಯಾಲಿಫೋರ್ನಿಯಾದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು, ಈತನ ಹುಡುಕಾಟದಲ್ಲಿ ನಿರತರಾಗಿದ್ದಾರೆ. ವ್ಯಕ್ತಿ ಡೋರ್ ಬೆಲ್ ನೆಕ್ಕುತ್ತಿರುವುದನ್ನು ನೋಡಿದರೆ ಆತ ಮಾನಸಿಕ ಕಾಯಿಲೆಯಿಂದ ಬಳಲುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.