ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.

ಲಕ್ನೋ (ಮಾ. 12): ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ.

ರಸ್ತೆ ಅಪಘಾತದಲ್ಲಿ ಕಾಲನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಆತನ ಮುರಿದ ಕಾಲನ್ನೇ ದಿಂಬುವಿನಂತೆ ಬಳಸಿರುವುದು ಬೆಳಕಿಗೆ ಬಂದಿದೆ. ಬಮೌರಿ ಗ್ರಾಮವೊಂದರಲ್ಲಿ ಶಾಲಾ ಬಸ್‌‌ ಅಪಘಾತಕ್ಕೀಡಾಗಿತ್ತು. ಇದರಲ್ಲಿ ಬಸ್‌ ಕ್ಲೀನರ್‌ ಧ್ಯಾನ್‌ ಶ್ಯಾಮ್‌ ಕಾಲು ಕಳೆದುಕೊಂಡಿದ್ದರು. ಗಾಯಾಳುವನ್ನು ಸರ್ಕಾರಿ ಮಹಾರಾಣಿ ಲಕ್ಷ್ಮೀಭಾಯಿ ಮೆಡಿಕಲ್‌ ಕಾಲೇಜಿಗೆ ದಾಖಲಿಸಲಾಗಿತ್ತು. ಧ್ಯಾನ್‌ಶ್ಯಾಮ್‌ಗೆ ಚಿಕಿತ್ಸೆ ನೀಡಿದ ವೈದ್ಯರು, ಉಳಿದ ಅರ್ಧ ಕಾಲಿನ ತುಂಡನ್ನು ಆತನ ತಲೆಯ ಕಳೆಗಡೆ ದಿಂಬುವಿನಂತೆ ಇಟ್ಟಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಘಟನೆ ಬಗ್ಗೆ ಅಧಿಕಾರಿಗಳು ತನಿಖೆಗೆ ಆದೇಶಿದ್ದಾರೆ. ನಾಲ್ವರು ಆಸ್ಪತ್ರೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. 

ಫೋಟೋ ಕೃಪೆ: ಇಂಡಿಯನ್ ಎಕ್ಸ್’ಪ್ರೆಸ್