ಮೂರು ದಿನಗಳಲ್ಲಿ ನೋಟ್ ನಿಷೇಧ ಹಿಂಪಡೆಯಲಿ, ಇಲ್ಲವಾದರೆ ಹೋರಾಟ ಎದುರಿಸಲು ಸಿದ್ಧರಾಗಿ ಎಂದು ಮಮತಾ ಬ್ಯಾನರ್ಜಿ ಸವಾಲೊಡಿದ್ದಾರೆ.
ನವದೆಹಲಿ (ನ.17): ದೊಡ್ಡ ಮುಖಬೆಲೆಯ ನೋಟುಗಳ ಅಪಮೌಲ್ಯೀಕರಣದಿಂದ ಕೇಂದ್ರ ಸರ್ಕಾರ ಜನರ ಜೀವ ಹಿಂಡುತ್ತಿದ್ದು, ಈ ಕೂಡಲೇ ನಿರ್ಧಾರ ವಾಪಸು ಪಡೆಯಬೇಕು ಎಂದು ಆಗ್ರಹಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಇಂದೂ ಕೂಡ ದೆಹಲಿಯಲ್ಲಿ ಪ್ರತಿಭಟನ ನಡೆಯಿತು.
ಈ ವೇಳೆ ಮಾತನಾಡಿದ ದೀದಿ, ಪ್ರಧಾನಿ ಮೋದಿ ದೇಶವನ್ನು ಮಾರಾಟ ಮಾಡಲು ಹೊರಟ್ಟಿದ್ದೀರಾ?, ನಾವು ದಿನನಿತ್ಯ ಎಟಿಎಂ ತಿನ್ನೋಕಾಗುತ್ತಾ.? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೂರು ದಿನಗಳಲ್ಲಿ ನೋಟ್ ನಿಷೇಧ ಹಿಂಪಡೆಯಲಿ, ಇಲ್ಲವಾದರೆ ಹೋರಾಟ ಎದುರಿಸಲು ಸಿದ್ಧರಾಗಿ ಎಂದು ಮಮತಾ ಬ್ಯಾನರ್ಜಿ ಸವಾಲೊಡಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೇಜ್ರಿವಾಲ್, ಕಪ್ಪು ಹಣದ ಹೆಸರಲ್ಲಿ ಕೇಂದ್ರದ ಭ್ರಷ್ಟಾಚಾರ ನಡೆಸುತ್ತಿದೆ. ಮೋದಿ ನಡೆ ಭ್ರಷ್ಠಾಚಾರದ ವಿರುದ್ಧವಾಗಿಲ್ಲ ಎಂದು ಕಿಡಿಕಾರಿದರು.
