ತಮ್ಮ ಬ್ಯಾಂಕ್ ಖಾತೆಗಳ ಎಲ್ಲ ವಹಿವಾಟಿನ ವಿವರ ನೀಡಬೇಕೆಂದು ಬಿಜೆಪಿಯ ಎಲ್ಲ ಸಂಸದರು ಹಾಗೂ ಶಾಸಕರಿಗೆ ಪ್ರಧಾನಿ ಮೋದಿ ಹೇಳುವ ಮುನ್ನ ತಮ್ಮ ಖಾತೆಯ ಮಾಹಿತಿ ಘೋಷಿಸಲಿ ಎಂದು ಮಮತಾ ಬ್ಯಾನರ್ಜಿ ದಿಟ್ಟತನ ತೋರಿಸಿದ್ದಾರೆ.

ಲಕ್ನೋ (ನ.29): ತಮ್ಮ ಬ್ಯಾಂಕ್ ಖಾತೆಗಳ ಎಲ್ಲ ವಹಿವಾಟಿನ ವಿವರ ನೀಡಬೇಕೆಂದು ಬಿಜೆಪಿಯ ಎಲ್ಲ ಸಂಸದರು ಹಾಗೂ ಶಾಸಕರಿಗೆ ಪ್ರಧಾನಿ ಮೋದಿ ಹೇಳುವ ಮುನ್ನ ತಮ್ಮ ಖಾತೆಯ ಮಾಹಿತಿ ಘೋಷಿಸಲಿ ಎಂದು ಮಮತಾ ಬ್ಯಾನರ್ಜಿ ದಿಟ್ಟತನ ತೋರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೋದಿಯವರು ಸರ್ವಾಧಿಕಾರಿ ಧೋರಣೆ ತಾಳಿದ್ದು ಇವರು ತುಘಲಕ್ ಹಾಗೂ ಹಿಟ್ಲರ್ ನನ್ನೇ ಮೀರಿಸಿದ್ದಾರೆ. ಜನಸಾಮಾನ್ಯರ ಸಾಂವಿಧಾನಿಕ ಹಕ್ಕನ್ನು ಹಗುರವಾಗಿ ಪರಿಗಣಿಸಿದ್ದಾರೆ. ನೋಟು ನಿಷೇಧ ವಿರುದ್ಧದ ಹೋರಾಟ ಮುಂದುವರೆಯುವುದು ಎಂದು ದೀದಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾಧ್ಯಮ ವರದಿಯನ್ನು ಆಧರಿಸಿ, ನೋಟು ನಿಷೇಧ ಕ್ರಮವನ್ನು ಘೋಷಿಸುವ ಮುನ್ನ ಭಾರೀ ಪ್ರಮಾಣದ ಆಸ್ತಿಯನ್ನು ಬಿಜೆಪಿ ಹೆಸರಿನಲ್ಲಿ, ಬಿಜೆಪಿ ಅಧ್ಯಕ್ಷರ ಹೆಸರಿನಲ್ಲಿ ಖರೀದಿಸಲಾಗಿದೆ ಎಂದು ಆರೋಪಿಸಿದ್ದಾರೆ.