ನೋಟು ಅಮಾನ್ಯ ಘೋಷಣೆಯಾಗಿ 50 ದಿನದೊಳಗಾಗಿ ಪರಿಸ್ಥಿತಿ ಸುಧಾರಿಸದಿದ್ದರೆ ರಾಜಿನಾಮೆ ನೀಡುತ್ತೇನೆಂದು ಪ್ರಧಾನಿ ಮೋದಿ ಮಾತು ನೀಡಿದ್ದರು. ಅದರಂತೆ ಮೋದಿ ರಾಜಿನಾಮೆ ನೀಡಬೇಕೆಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ನವದೆಹಲಿ (ಡಿ. 27): ನೋಟು ಅಮಾನ್ಯ ಘೋಷಣೆಯಾಗಿ 50 ದಿನದೊಳಗಾಗಿ ಪರಿಸ್ಥಿತಿ ಸುಧಾರಿಸದಿದ್ದರೆ ರಾಜಿನಾಮೆ ನೀಡುತ್ತೇನೆಂದು ಪ್ರಧಾನಿ ಮೋದಿ ಮಾತು ನೀಡಿದ್ದರು. ಅದರಂತೆ ಮೋದಿ ರಾಜಿನಾಮೆ ನೀಡಬೇಕೆಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಗರಿಷ್ಟ ಮುಖಬೆಲೆಯ ನೋಟು ನಿಷೇಧ ಮಾಡುವ ಮುನ್ನ ಸಂಸತ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಮಮತಾ ನೇರವಾಗಿ ಮೋದಿಯವರ ಮೇಲೆ ಆರೋಪಿಸಿದ್ದಾರೆ.

50 ದಿನಗಳಲ್ಲಿ ಪರಿಸ್ಥಿತಿ ತಹಬದಿಗೆ ಬರದಿದ್ದರೆ ನೀವು ರಾಜಿನಾಮೆ ನೀಡುವಿರಾ? ದೇಶವನ್ನು 20 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿ ನೀವು ಮಾಡಿದ್ದೇನು? ಎಂದು ಮೋದಿಯವರಿಗೆ ಪ್ರಶ್ನಿಸಿದ್ದಾರೆ.