ಮೊನ್ನೆ ನಡೆದ ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಮದ್ಯ ದೊರೆ ವಿಜಯ್ ಮಲ್ಯ ಕಾಣಿಸಿಕೊಂಡಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ನವದೆಹಲಿ(ಜೂ.06): ಮೊನ್ನೆ ನಡೆದ ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಮದ್ಯ ದೊರೆ ವಿಜಯ್ ಮಲ್ಯ ಕಾಣಿಸಿಕೊಂಡಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಭಾರತ ಮಾಧ್ಯಮಗಳ ವಿರುದ್ಧ ಉದ್ಯಮಿ ವಿಜಯ್ ಮಲ್ಯ ಗರಂ ಆಗಿದ್ದಾರೆ. ಭಾರತದ ಮಾಧ್ಯಮಗಳ ಬಗ್ಗೆ ಕಿಡಿಕಾರಿ ಟ್ವೀಟ್ ಮಾಡಿರುವ ವಿಜಯ್ ಮಲ್ಯ, ನಾನು ವಿದೇಶಗಳಲ್ಲಿ ನಡೆಯುವ ಭಾರತದ ಎಲ್ಲ ಪಂದ್ಯಗಳನ್ನು ವೀಕ್ಷಿಸುವೆ. ಟೀಮ್ ಇಂಡಿಯಾ ಪ್ರೊತ್ಸಾಹಿಸಲು ಪಂದ್ಯ ವೀಕ್ಷಣೆಗೆ ತೆರಳಿದಿದ್ದೆ. ಆದರೆ ನಾನು ಹಾಜರಾಗಿದ್ದನ್ನೇ ಭಾರತದ ಮಾಧ್ಯಮಗಳು ಅನಗತ್ಯವಾಗಿ ಪ್ರಸಾರ ಮಾಡಿವೆ ಅಂತಾ ಗುಡುಗಿದ್ದಾರೆ.
ಅಲ್ಲದೇ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಕುರಿತು ಹೊಗಳಿಕೆ ಮಾತುಗಳನ್ನಾಡಿರುವ ಮಲ್ಯ, 'ಕೊಹ್ಲಿ ಓರ್ವ ವಿಶ್ವದರ್ಜೆ ಆಟಗಾರ, ನಾಯಕ ಮತ್ತು ಜೆಂಟಲ್‌ಮೆನ್' ಎಂದು ಹೊಗಳಿದ್ದಾರೆ.
