ಲೇಡೀಸ್‌ ಹಾಸ್ಟೆಲ್‌ಗೆ ಪುರುಷ ವಾರ್ಡನ್‌

Male Warden In This Ladies Hostel
Highlights

ಮಹಿಳಾ ವಸತಿ ನಿಲಯಕ್ಕೆ ಪುರುಷ ವಾರ್ಡನ್ ನೇಮಕ ಮಾಡಲಾಗಿದ್ದು, ಈ ವಾರ್ಡನ್ ಗಳನ್ನು  ಬದಲಾಯಿಸಿ ಕೂಡಲೇ ಮಹಿಳಾ ಮೇಲ್ವಿಚಾರಕರನ್ನು ನೇಮಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರು ಒತ್ತಾಯಿಸಿದರು. 

ವಿಧಾನ ಪರಿಷತ್‌ :  ಬೀದರ್‌ ಜಿಲ್ಲೆಯ ಭಾಲ್ಕಿ ತಾಲೂಕಿನ ಮೂರು ಮಹಿಳಾ ವಸತಿ ಶಾಲೆಯಲ್ಲಿ ನೇಮಕಗೊಂಡಿರುವ ಪುರುಷ ಮೇಲ್ವಿಚಾರಕರನ್ನು ಬದಲಾಯಿಸಿ ಕೂಡಲೇ ಮಹಿಳಾ ಮೇಲ್ವಿಚಾರಕರನ್ನು ನೇಮಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರು ಒತ್ತಾಯಿಸಿದರು. 

ರಾಜ್ಯಪಾಲರ ಭಾಷಣ ಕುರಿತು ಮಾತನಾಡಿದ ಅವರು, ಸಮಾಜಕಲ್ಯಾಣ ಇಲಾಖೆಯು ಯಾವ ರೀತಿಯಲ್ಲಿ ವಸತಿ ಶಾಲೆಗಳನ್ನು ನಿರ್ವಹಿಸುತ್ತಿದೆ ಎಂಬುದು ತಿಳಿಯದಾಗಿದೆ. ಮಹಿಳಾ ಮೇಲ್ವಿಚಾರಕರನ್ನು ನೇಮಿಸುವ ಜತೆಗೆ ಶೌಚಾಲಯ, ಸ್ನಾನಗೃಹಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಮನವಿ ಮಾಡಿದರು.

loader