ಸಾಧುವೊಬ್ಬ ಮಹಿಳೆಯೊಂದಿಗೆ ಪ್ರೇಮ ವ್ಯವಹಾರ ಇಟ್ಟುಕೊಂಡಿರುವ ಆರೋಪಕ್ಕೆ ಗುರಿಯಾಗಿದ್ದರಿಂದ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.

ಲಕ್ನೋ : ಸಾಧು ಸಂತರ ವಿರುದ್ಧವೂ ಆರೋಪಗಳು ಹೊಸದೇನಲ್ಲ. ಆದರೆ, ಉತ್ತರ ಪ್ರದೇಶದ ಸಾಧುವೊಬ್ಬ ಮಹಿಳೆಯೊಂದಿಗೆ ಪ್ರೇಮ ವ್ಯವಹಾರ ಇಟ್ಟುಕೊಂಡಿರುವ ಆರೋಪಕ್ಕೆ ಗುರಿಯಾಗಿದ್ದರಿಂದ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂದಾ ಜಿಲ್ಲೆಯ ನಿವಾಸಿ ಮದಾನಿ ಬಾಬಾ ಎಂಬಾತ ಕಳೆದ ಕೆಲವು ವರ್ಷಗಳಿಂದ ಕಮ್ಸಿನ್ ಗ್ರಾಮದ ಖಾಲಿ ಜಾಗವೊಂದರಲ್ಲಿ ಪುಟ್ಟ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದ. ತನ್ನ ವಿರುದ್ಧ ಆರೋಪ ಕೇಳಿ ಬಂದಿದ್ದರಿಂದ ಮನನೊಂದು ೯ ದಿನಗಳ ನವರಾತ್ರಿ
ಉಪವಾಸದ ವೇಳೆ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

ತಾನು ಕಟ್ಟಡ ನಿರ್ಮಿಸಲು ಮುಂದಾಗಿದ್ದರಿಂದ ಸಂಚು ರೂಪಿಸಲಾಗಿದೆ ಎಂದು ಮದನಿ ಬಾಬಾ ಆರೋಪಿ ಸಿದ್ದಾನೆ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.