ಏಸು ಕ್ರಿಸ್ತನ ಹುಟ್ಟಿನ ಬಗ್ಗೆ 1926ರಲ್ಲಿ ಮಹಾತ್ಮಾ ಗಾಂಧೀಜಿ ಬರೆದಿದ್ದ ಅತ್ಯಂತ ಮಹತ್ವದ ಭಾವನಾತ್ಮಕ ಪತ್ರ ಅಮೆರಿಕದಲ್ಲಿ 32 ಲಕ್ಷ ರು. ಗೆ ಗುರುವಾರ ಮಾರಾಟಕ್ಕಿದೆ 1926 ಏ.6ರಂದು ಗಾಂಧೀಜಿ ಸಾಬರಮತಿ ಆಶ್ರಮದಲ್ಲಿದ್ದಾಗ ಅಮೆರಿಕದ ಕ್ರಿಶ್ಚಿಯನ್‌ ಪಾದ್ರಿ ಮಿಲ್ಟನ್‌ ನ್ಯೂಬೆರ್ರಿ ಫ್ರಾನ್ಜ್ ಅವರಿಗೆ ಈ ಪತ್ರ ಬರೆದಿದ್ದರು.

ವಾಷಿಂಗ್ಟನ್‌: ಏಸು ಕ್ರಿಸ್ತನ ಹುಟ್ಟಿನ ಬಗ್ಗೆ 1926ರಲ್ಲಿ ಮಹಾತ್ಮಾ ಗಾಂಧೀಜಿ ಬರೆದಿದ್ದ ಅತ್ಯಂತ ಮಹತ್ವದ ಭಾವನಾತ್ಮಕ ಪತ್ರ ಅಮೆರಿಕದಲ್ಲಿ 32 ಲಕ್ಷ ರು. ಗೆ ಗುರುವಾರ ಮಾರಾಟಕ್ಕಿದೆ 1926 ಏ.6ರಂದು ಗಾಂಧೀಜಿ ಸಾಬರಮತಿ ಆಶ್ರಮದಲ್ಲಿದ್ದಾಗ ಅಮೆರಿಕದ ಕ್ರಿಶ್ಚಿಯನ್‌ ಪಾದ್ರಿ ಮಿಲ್ಟನ್‌ ನ್ಯೂಬೆರ್ರಿ ಫ್ರಾನ್ಜ್ ಅವರಿಗೆ ಈ ಪತ್ರ ಬರೆದಿದ್ದರು.

ಶಾಯಿಯಲ್ಲಿ ಬರೆದು ಸಹಿ ಹಾಕಿರುವ ಈ ಪತ್ರವು ಪೆನ್ಸಿಲ್ವೇನಿಯಾ ಮೂಲದ ಐತಿಹಾಸಿಕ ವಸ್ತುಗಳ ಸಂಗ್ರಹ ಸಂಸ್ಥೆ ರಾರ‍ಯಬ್‌ ಕಲೆಕ್ಷನ್‌ ಬಳಿ ಇದ್ದು, ಪತ್ರವನ್ನು ಈ ಸಂಸ್ಥೆ ಮಾರಾಟಕ್ಕಿಟ್ಟಿದೆ.

‘ಏಸು ಕ್ರಿಸ್ತ ಮಾನವಕುಲದ ಗುರು ಎಂದು ಗಾಂಧಿ ನಂಬಿದ್ದರು, ಈ ಪತ್ರದಲ್ಲಿಯೂ ಕೂಡ ಅದೇ ಸಂದೇಶವಿದೆ. ಬಹಶಃ ಧರ್ಮದ ಬಗ್ಗೆ ಗಾಂಧಿ ಬರೆದಿರುವ ಅದ್ಭುತ ಪತ್ರ’ ಎಂದು ರಾರ‍ಯಬ್‌ ಕಲೆಕ್ಷನ್‌ನ ಮುಖ್ಯಸ್ಥ ನೇಥನ್‌ ರಾರ‍ಯಬ್‌ ಹೇಳಿದ್ದಾರೆ.