ಬಾಳಾ ಠಾಕ್ರೆ ಅವರ ವ್ಯಕ್ತಿತ್ವವನ್ನು ಸ್ಮರಣೆ| ಆದಿತ್ಯ ಠಾಕ್ರೆ ಅವರು ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಗೆದ್ದು ಬರುತ್ತಾರೆ| ಆದಿತ್ಯ ಠಾಕ್ರೆ ಬೆಂಬಲಿಸಿ ನಟ ಸಂಜಯ್‌ ದತ್‌ ವಿಡಿಯೋ ಟ್ವೀಟ್‌| 

ಮುಂಬೈ[ಅ.17]: ಮಹಾರಾಷ್ಟ್ರ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ನಟ ಸಂಜಯ್‌ ದತ್‌ ಅವರು ಇದೇ ಮೊದಲ ಬಾರಿಗೆ ಚುನಾವಣಾ ಕಣದಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವಸೇನೆ ಸಂಸ್ಥಾಪಕ ಬಾಳಾ ಸಾಹೆಬ್‌ ಠಾಕ್ರೆ ಮನೆತನದ ಕುಡಿ ಆದಿತ್ಯ ಠಾಕ್ರೆ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿರುವ ಸಂಜಯ್‌ ದತ್‌ ಅವರು ಬಾಳಾ ಠಾಕ್ರೆ ಅವರ ವ್ಯಕ್ತಿತ್ವವನ್ನು ಸ್ಮರಿಸಿದ್ದಾರೆ.

Scroll to load tweet…

ಅಲ್ಲದೆ, ಅವರ ಗರಡಿಯಲ್ಲಿ ಪಳಗಿರುವ ಆದಿತ್ಯ ಠಾಕ್ರೆ ಅವರು ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಗೆದ್ದು ಬರುತ್ತಾರೆ. ಶಿವಸೇನೆಯನ್ನು ಮುನ್ನಡೆಸುವ ಯುವ ನಾಯಕರಾಗಿ ಹೊರಹೊಮ್ಮಲಿದ್ದಾರೆ ಎಂದು ಶುಭಕೋರಿದ್ದಾರೆ