ಮಹಾ ನಾಗರಿಕರಿಗೆ ಸರ್ಕಾರಿ ದಾಖಲೆ ಪರಿಶೀಲನೆ ಅವಕಾಶ | ಮಹಾರಾಷ್ಟ್ರದಲ್ಲಿ ಪಾರದರ್ಶಕತೆಯತ್ತ ಸ್ವಾಗತಾರ್ಹ ಹೆಜ್ಜೆ |  ಪ್ರತಿ ಸೋಮವಾರ 3ರಿಂದ 5ರವರೆಗೆ ಕಚೇರಿಗೆ ಹೋಗಿ ದಾಖಲೆ ಪರಿಶೀಲಿಸಿ

ಮುಂಬೈ (ಡಿ. 04): ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್‌ ಸರ್ಕಾರವು ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸ್ವಾಗತಾರ್ಹ ಹೆಜ್ಜೆ ಇರಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಖುದ್ದು ಹೋಗಿ ಕಡತ ತಪಾಸಣೆ ಮಾಡಲು ಮಾಹಿತಿ ಹಕ್ಕಿನ ಅಡಿ ಅವಕಾಶ ನೀಡಿದೆ.

Add Asianetnews Kannada as a Preferred SourcegooglePreferred

ಮಾಹಿತಿ ಹಕ್ಕು ಅಡಿಯಲ್ಲಿ ಈ ಅವಕಾಶವನ್ನು ಸಾರ್ವಜನಿಕರಿಗೆ ಸರ್ಕಾರ ಕಲ್ಪಿಸಿದೆ. ಈ ಪ್ರಕಾರ, ಜಿಲ್ಲಾ ಮಟ್ಟದ ಕಚೇರಿಗಳು, ನಗರಪಾಲಿಕೆ, ನಗರಸಭೆ, ಪುರಸಭೆಗಳು, ಜಿಲ್ಲಾ ಪಂಚಾಯಿತಿಗಳು ಹಾಗೂ ಇತರ ಕೆಲವು ಕಚೇರಿಗಳಿಗೆ ಪ್ರತಿ ಸೋಮವಾರ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಸಾರ್ವಜನಿಕರು ಭೇಟಿ ನೀಡಿ ಕಡತ ಪರಿಶೀಲನೆ ಮಾಡಬಹುದಾಗಿದೆ.

ಸೋಮವಾರ ರಜಾ ದಿನ ಇದ್ದರೆ ಮರುದಿವಸ ಪರಿಶೀಲಿಸಬಹುದಾಗಿದೆ. ಇದಕ್ಕಾಗಿ ಯಾವುದೇ ಶುಲ್ಕವಿಲ್ಲ ಎಂದು ನ.26ರಂದು ಹೊರಡಿಸಲಾದ ಅಧಿಸೂಚನೆ ಹೇಳಿದೆ. ಆದರೆ ಈ ಆದೇಶವು ಮಹಾರಾಷ್ಟ್ರ ಮಂತ್ರಾಲಯಕ್ಕೆ (ವಿಧಾನಸೌಧದ ಸಚಿವಾಲಯಕ್ಕೆ) ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.