Asianet Suvarna News Asianet Suvarna News

ನಂಜನಗೂಡಿನತ್ತ ಮಹದೇವಪ್ಪ ಕಣ್ಣು : ಸಿಎಂಗೆ ಇಕ್ಕಟ್ಟು

ಹಾಗಾ​ದರೆ ಸಂಕ​ಷ್ಟದ ಸಂದ​ರ್ಭ​ದಲ್ಲಿ ಪಕ್ಷ ಸೇರಿದ ಕಳಲೆ ಕೇಶ​ವ​ಮೂರ್ತಿ ಅವರನ್ನು ಏನು ಮಾಡ​ಬೇಕು ಎಂಬ ಪ್ರಶ್ನೆಗೆ, ಜೂನ್‌ ವೇಳೆಗೆ ವಿಧಾ​ನ​ಪ​ರಿ​ಷತ್‌ ಸ್ಥಾನ​ಗಳು ತೆರ​ವಾ​ಗ​ಲಿದ್ದು, ಆಗ ಅವ​ರನ್ನು ವಿಧಾ​ನ​ಪ​ರಿ​ಷ​ತ್ತಿಗೆ ಪಕ್ಷ​ದಿಂದ ಆಯ್ಕೆ ಮಾಡುವ ಭರ​ವಸೆ ನೀಡ​ಬ​ಹುದು ಎಂಬ ಸಮ​ಜಾ​ಯಿ​ಷಿ​ಯನ್ನು ಮಹ​ದೇ​ವಪ್ಪ ನೀಡು​ತ್ತಿ​ದ್ದಾರೆ ಎಂದು ಸಿಎಂ ಆಪ್ತ ಮೂಲ​ಗಳು ತಿಳಿ​ಸಿ​ವೆ.

Mahadevappa New Master Plan

ಬೆಂಗ​ಳೂರು: ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ನಲ​ಪಾಡ್‌ ಪ್ರಕ​ರ​ಣದ ನಂತರ ಬೆಂಗ​ಳೂ​ರಿನ ಸಿ.ವಿ. ರಾಮನ್‌ ನಗರ ಕ್ಷೇತ್ರ​ದಿಂದ ಸ್ಪರ್ಧಿ​ಸಲು ಹಿಂಜ​ರಿ​ಯು​ತ್ತಿ​ರುವ ಲೋಕೋ​ಪ​ಯೋಗಿ ಸಚಿವ ಡಾ. ಎಚ್‌.ಸಿ. ಮಹ​ದೇ​ವಪ್ಪ ಅವರ ಕಣ್ಣು ಇದೀಗ ನಂಜ​ನ​ಗೂಡು ಕ್ಷೇತ್ರದ ಮೇಲೆ ಬಿದ್ದಿದೆ ಎಂದು ಕಾಂಗ್ರೆಸ್‌ ಉನ್ನತ ಮೂಲ​ಗಳು ತಿಳಿ​ಸಿ​ವೆ.

ಉಪ ಚುನಾ​ವ​ಣೆ​ಯಲ್ಲಿ ಕಾಂಗ್ರೆ​ಸ್‌ ವಶ​ವಾ​ಗಿದ್ದ ನಂಜ​ನ​ಗೂಡು ಕ್ಷೇತ್ರ​ದ ಟಿಕೆಟ್‌ ತಮಗೆ ಕೊಡ​ಬೇಕು ಹಾಗೂ ಟಿ. ನರ​ಸೀ​ಪುರ ಕ್ಷೇತ್ರದ ಟಿಕೆಟ್‌ ಪುತ್ರ ಸುನೀಲ್‌ ಬೋಸ್‌ಗೆ ನೀಡ​ಬೇಕು ಎಂಬುದು ಮಹ​ದೇ​ವಪ್ಪ ಅವರ ಹೊಸ ಪಟ್ಟು. ಇದಕ್ಕೆ ಅವರು ನೀಡು​ತ್ತಿ​ರುವ ಕಾರ​ಣ- ಉಪ ಚುನಾ​ವ​ಣೆ​ ವೇಳೆ ಜೆಡಿ​ಎ​ಸ್‌​ನ​ಲ್ಲಿದ್ದ ಕಳಲೆ ಕೇಶ​ವ​ಮೂರ್ತಿ ಅವರು ಪಕ್ಷಕ್ಕೆ ಸೇರಿ​ದರೂ ಅವರ ಇಡೀ ಚುನಾ​ವ​ಣೆ​ಯನ್ನು ನಡೆ​ಸಿದ್ದ ತಾವು (ತಂದೆ ಮಹ​ದೇ​ವ​ಪ್ಪ ಹಾಗೂ ಮಗ ಸುನೀಲ್‌ ಬೋಸ್‌ ). ಚುನಾ​ವ​ಣೆಯ ಸಂಪೂರ್ಣ ಹೊಣೆ ಹೊತ್ತು ಕಳಲೆ ಕೇಶ​ವ​ಮೂರ್ತಿ ಅವ​ರನ್ನು ಗೆಲ್ಲಿ​ಸಿಕೊಂಡು ಬಂದಿ​ದ್ದೇವೆ.

ಹಾಗಾ​ದರೆ ಸಂಕ​ಷ್ಟದ ಸಂದ​ರ್ಭ​ದಲ್ಲಿ ಪಕ್ಷ ಸೇರಿದ ಕಳಲೆ ಕೇಶ​ವ​ಮೂರ್ತಿ ಅವರನ್ನು ಏನು ಮಾಡ​ಬೇಕು ಎಂಬ ಪ್ರಶ್ನೆಗೆ, ಜೂನ್‌ ವೇಳೆಗೆ ವಿಧಾ​ನ​ಪ​ರಿ​ಷತ್‌ ಸ್ಥಾನ​ಗಳು ತೆರ​ವಾ​ಗ​ಲಿದ್ದು, ಆಗ ಅವ​ರನ್ನು ವಿಧಾ​ನ​ಪ​ರಿ​ಷ​ತ್ತಿಗೆ ಪಕ್ಷ​ದಿಂದ ಆಯ್ಕೆ ಮಾಡುವ ಭರ​ವಸೆ ನೀಡ​ಬ​ಹುದು ಎಂಬ ಸಮ​ಜಾ​ಯಿ​ಷಿ​ಯನ್ನು ಮಹ​ದೇ​ವಪ್ಪ ನೀಡು​ತ್ತಿ​ದ್ದಾರೆ ಎಂದು ಸಿಎಂ ಆಪ್ತ ಮೂಲ​ಗಳು ತಿಳಿ​ಸಿ​ವೆ.

3 ಪ್ರಬಲ ಕಾರಣ

ಬೆಂಗ​ಳೂ​ರಿನ ಸಿ.ವಿ. ರಾಮನ್‌ ನಗ​ರ​ದಿಂದ ಸ್ಪರ್ಧಿ​ಸಲು ಮುಂದಾ​ಗಿದ್ದ ಮಹ​ದೇ​ವಪ್ಪ ಹೀಗೆ ಮತ್ತೆ ತಮ್ಮ ಜಿಲ್ಲೆಗೆ ಮರ​ಳಲು ನಿರ್ಧ​ರಿ​ಸಿ​ರು​ವು​ದರ ಹಿಂದೆ ಮೂರು ಪ್ರಬಲ ಕಾರ​ಣ​ಗಳು ಇವೆ ಎನ್ನ​ಲಾ​ಗು​ತ್ತಿದೆ. ಹ್ಯಾರಿಸ್‌ ಪುತ್ರ ನಳ​ಪಾಡ್‌ ಪ್ರಕ​ರ​ಣವು ಬೆಂಗ​ಳೂ​ರಿನ ಕೆಲ ಕ್ಷೇತ್ರ​ಗಳ ಮೇಲೆ ನಕಾರಾ​ತ್ಮಕ ಪರಿ​ಣಾಮ ಬೀರಿದೆ. ಹೀಗಾಗಿ ಸಿ.ವಿ. ರಾಮ​ನ್‌​ನ​ಗ​ರ​ದಿಂದ ಸ್ಪರ್ಧಿ​ಸಿ​ದರೆ ಗೆಲ್ಲುವ ನಂಬಿಕೆ ಮೊದ​ಲಿ​ನಷ್ಟುಮಹ​ದೇ​ವ​ಪ್ಪಗೆ ಇಲ್ಲ.

ಇನ್ನೊಂದು ಸಿ.ವಿ. ರಾಮನ್‌ ನಗರ ಕ್ಷೇತ್ರದ ಆಕಾಂಕ್ಷಿ ರಮೇಶ್‌ ಅವರು ಮಹ​ದೇ​ವಪ್ಪ ಸ್ಪರ್ಧೆಗೆ ಸಹ​ಕ​ರಿ​ಸು​ತ್ತಿಲ್ಲ. ಸಿದ್ದ​ರಾ​ಮಯ್ಯ ಅವರ ಮಧ್ಯ​ಪ್ರ​ವೇ​ಶ​ದಿಂದಾಗಿ ಮಹ​ದೇ​ವಪ್ಪ ಸ್ಪರ್ಧೆಗೆ ಕೆಲ​ವೊಮ್ಮೆ ಒಪ್ಪಿ​ಕೊಂಡಂತೆ ಕಂಡರೂ ಒಳಗೆ ಅವರ ವಿರುದ್ಧ ಕೆಲಸ ಮಾಡಲಿ​ದ್ದಾರೆ. ಅಷ್ಟೇ ಅಲ್ಲ, ತಮಗೆ ಟಿಕೆಟ್‌ ದೊರೆ​ಯ​ದಿ​ದ್ದರೆ ಬಂಡಾ​ಯ​ವೇ​ಳುವ ಬೆದ​ರಿ​ಕೆ​ಯ​ನ್ನು ರಮೇಶ್‌ವೊಡ್ಡಿ​ದ್ದಾರೆ ಎನ್ನ​ಲಾ​ಗಿದೆ.

ಇದ​ಲ್ಲದೆ, ಬೆಂಗ​ಳೂ​ರಿನ ಪಕ್ಷದ ಘಟಾನುಘಟಿ ನಾಯ​ಕ​ರಿಗೆ ಪ್ರಭಾವಿ ಮಹ​ದೇ​ವಪ್ಪ ಅವರು ಸಿ.ವಿ. ರಾಮನ್‌ನಗ​ರದ ವಿಧಾ​ನ​ಸಭಾ ಕ್ಷೇತ್ರ​ದಿಂದ ಸ್ಪರ್ಧಿ​ಸು​ವುದು ಬೇಕಾ​ಗಿಲ್ಲ. ಒಂದು ವೇಳೆ ಮಹ​ದೇ​ವಪ್ಪ ಸ್ಪರ್ಧಿ​ಸಿ​ದರೂ ಅವರ ವಿರುದ್ಧ ನಗ​ರದ ಕೆಲ ಪ್ರಮುಖ ನಾಯ​ಕರೇ ಕೆಲಸ ಮಾಡುವ ಗುಮಾನಿ ಮಹ​ದೇ​ವಪ್ಪ ಅವ​ರಿಗೆ ಇದೆ ಎನ್ನ​ಲಾ​ಗಿ​ದೆ.

ನರ​ಸೀ​ಪು​ರಕ್ಕೆ ಕಾಲಿ​ಡಲು ಪುತ್ರ ಬಿಡು​ತ್ತಿ​ಲ್ಲ!:

ಈ ಎಲ್ಲಾ ಕಾರ​ಣ​ಗ​ಳಿ​ಗಾಗಿ ಬೆಂಗ​ಳೂರು ತ್ಯಜಿಸಲು ಅವರು ನಿರ್ಧ​ರಿ​ಸಿ​ದ್ದು, ಕೆಪಿ​ಸಿ​ಸಿಯು ಟಿಕೆ​ಟ್‌​ಗಾಗಿ ಅರ್ಜಿ ಕರೆದ ಸಂದ​ರ್ಭ​ದಲ್ಲಿ ಮಹ​ದೇ​ವಪ್ಪ ಅವರ ತಮ್ಮ ಪುತ್ರನ ಸಂಗಡ ತಾವೂ ಟಿ. ನರ​ಸೀ​ಪುರ ಕ್ಷೇತ್ರಕ್ಕೆ ಅರ್ಜಿ ಹಾಕಿ​ಕೊಂಡಿ​ದ್ದಾ​ರೆ. ಮಹ​ದೇ​ವಪ್ಪ ಅವರ ಆಪ್ತರ ಪ್ರಕಾರ, ವಾಸ್ತ​ವ​ವಾಗಿ ಅವ​ರಿಗೆ ಟಿ. ನರ​ಸೀ​ಪು​ರ​ದಿಂದಲೇ ಸ್ಪರ್ಧಿ​ಸುವ ಬಯ​ಕೆ​ಯಿದೆ. ಆದರೆ, ಮಹ​ದೇ​ವಪ್ಪ ಅವರ ಪುತ್ರ ಸುನೀಲ್‌ ಬೋಸ್‌ ಹಾಗೂ ಅವರ ಪತ್ನಿ ಇದನ್ನು ಒಪ್ಪು​ತ್ತಿಲ್ಲ. ಹೀಗೆ ಕುಟುಂಬದ ಒತ್ತ​ಡ​ದಿಂದ ಟೀ. ನರ​ಸೀ​ಪುರ ಕ್ಷೇತ್ರ​ಕ್ಕೆ ಪರ್ಯಾಯ ಕ್ಷೇತ್ರ​ವಾಗಿ ಅವರು ಬೆಂಗ​ಳೂರಿನ ಸಿ.ವಿ. ರಾಮ​ನ್‌ ನಗರ ಕ್ಷೇತ್ರ​ದತ್ತ ಮುಖ ಮಾಡಿ​ದರೂ ಅಲ್ಲಿ ಗೆಲ್ಲುವ ವಿಶ್ವಾಸ ಇಲ್ಲದ ಕಾರಣ ಆ ನಿರ್ಧಾರ ಕೈ ಬಿಟ್ಟಿ​ದ್ದಾರೆ ಎನ್ನ​ಲಾ​ಗಿ​ದೆ.

ಇನ್ನು ಮೈಸೂರು ಜಿಲ್ಲೆ​ಯಲ್ಲೂ ಅವ​ರಿಗೆ ಬೇರೆ ಸುರ​ಕ್ಷಿತ ಕ್ಷೇತ್ರ​ವಿಲ್ಲ. ಹೀಗಾಗಿ ನಂಜ​ನ​ಗೂಡು ಕ್ಷೇತ್ರವೇ ಅವ​ರಿಗೆ ಆಪ್ಯಾಯಮಾನ​ವಾಗಿ ಕಂಡಿದೆ. ಆದರೆ, ಈ ಕ್ಷೇತ್ರದ ಟಿಕೆಟ್‌ ಪಡೆ​ಯಲು ಇರುವ ಏಕೈಕ ಅಡ್ಡಿ ಎಂದರೆ ಹಾಲಿ ಶಾಸಕ ಕಳಲೆ ಕೇಶ​ವ​ಮೂರ್ತಿ. ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರ ಆಹ್ವಾನ ಮೇರೆಗೆ ಜೆಡಿ​ಎಸ್‌ ತ್ಯಜಿಸಿ ಕಾಂಗ್ರೆಸ್‌ ಸೇರಿದ್ದ ಕಳಲೆ ಕೇಶ​ವ​ಮೂರ್ತಿ ಉಪ ಚುನಾ​ವ​ಣೆ​ಯಲ್ಲಿ ಪಕ್ಷಕ್ಕೆ ಭರ್ಜರಿ ಗೆಲುವು ಬರಲು ಕಾರ​ಣ​ರಾ​ಗಿ​ದ್ದರು. ಈ ಗೆಲು​ವು​ದಿಲ್ಲ ಮಹ​ದೇ​ವಪ್ಪ ಹಾಗೂ ಅವರ ಪುತ್ರ ಸುನೀಲ್‌ ಬೋಸ್‌ ಪಾತ್ರವೂ ದೊಡ್ಡದು.

ಹೀಗಾಗಿ ಕಳ​ಲೆ ಕೇಶ​ಮೂರ್ತಿ ಅವ​ರನ್ನು ಮನ​ವೊ​ಲಿಸಿ ತಮಗೆ ಟಿಕೆಟ್‌ ಕೊಡಿಸಿ ಎಂದು ಮಹ​ದೇ​ವಪ್ಪ ಇದೀಗ ಸಿದ್ದ​ರಾ​ಮಯ್ಯ ಅವರಿಗೆ ದುಂಬಾಲು ಬಿದ್ದಿ​ದ್ದಾರೆ ಎನ್ನ​ಲಾ​ಗಿದೆ. ಸಿದ್ದ​ರಾ​ಮಯ್ಯ ಯಾವ ತೀರ್ಮಾನ ಕೈಗೊ​ಳ್ಳು​ವರು ಕಾದು ನೋಡ​ಬೇ​ಕು.

- ಎಸ್‌.​ಗಿ​ರೀ​ಶ್‌​ಬಾ​ಬು

Follow Us:
Download App:
  • android
  • ios